ಕೋವಿಡ್ ವಾರ್ ರೂಂಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
1 min readಮೈಸೂರು: ಕೋವಿಡ್ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ವಾರ್ ರೂಂಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚಾಲನೆ ನೀಡಿದರು.
ವಾರ್ ರೂಂ 24 ಗಂಟೆಗಳಲ್ಲೂ ಕೆಲಸ ನಿರ್ವಹಿಸಲಿದೆ. ಆಸ್ಪತ್ರೆಗಳ ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳನ್ನು ವಾರ್ ರೂಂ ನಿರ್ವಹಿಸಲಿದೆ.
ವಾರ್ ರೂಂ ಸಹಾಯವಾಣಿ ಸಂಖ್ಯೆ: 0821-2424111, 0821-2957811, 0821-2957711ಯನ್ನು ಸಂಪರ್ಕಿಸಬಹುದು. ಈ ಸಹಾಯವಾಣಿ ಸಂಖ್ಯೆಗಳು ಬುಧವಾರದಿಂದ ಕಾರ್ಯನಿರ್ವಹಿಸಲಿವೆ.