ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟ ಆರೋಪ – ಈ ಬಗ್ಗೆ ಸದ್ಯಕ್ಕೆ ನನ್ನ ಬಳಿ ಉತ್ತರವಿಲ್ಲ: ಡಿಸಿ ಬಗಾದಿ ಗೌತಮ್
1 min readಮೈಸೂರು: ಮೈಸೂರು ನಗರದಲ್ಲಿ ಕೋವಿಡ್ ಸಾವು ಮುಚ್ಚಿಟ್ಟ ವಿಚಾರ. ಈ ಬಗ್ಗೆ ಸದ್ಯಕ್ಕೆ ನನ್ನ ಬಳಿ ಉತ್ತರವಿಲ್ಲ ಅಂತ ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಅಂಕಿ ಅಂಶಗಳನ್ನು ಕಲೆ ಹಾಕಲಾಗುತ್ತಿದೆ. ಮಾಹಿತಿ ಸಿಕ್ಕ ನಂತರ ಈ ಬಗ್ಗೆ ಗೊತ್ತಾಗಲಿದೆ ಅಂತ ಆರೋಪದ ಬಗ್ಗೆ ಡಿಸಿ ಬಗಾದಿ ಗೌತಮ್ ಸ್ಪಷ್ಟ ಉತ್ತರ ನೀಡಲಿಲ್ಲ.
ಈ ವೇಳೆ ಸಚಿವ ಎಸ್ ಟಿ ಸೋಮಶೇಖರ್ ಅವರು ಸ್ಪಷ್ಟನೆ ನೀಡಿದ್ದು, ಜಿಲ್ಲಾಧಿಕಾರಿಗಳು ಹೊಸದಾಗಿ ಬಂದಿದ್ದಾರೆ. ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಸಾವಿನ ವಿಚಾರವಿರಲಿ ಯಾವುದೇ ಇರಲಿ ಬ್ಲ್ಯಾಕ್ ಅಂಡ ವೈಟ್ ಇಲ್ಲ. ಎಲ್ಲವನ್ನೂ ನಿಮಗೆ ತಿಳಿಸುತ್ತೇವೆ. ಸಾವಿನ ಲೆಕ್ಕಾಚಾರದ ಬಗ್ಗೆ ಸಚಿವರು ಸಹ ಸಮರ್ಪಕ ಮಾಹಿತಿ ನೀಡಲಿಲ್ಲ. ತರಾತುರಿಯಲ್ಲಿ ಪತ್ರಿಕಾಗೋಷ್ಠಿ ಮುಗಿಸಿ ಸಚಿವ ಎಸ್ ಟಿ ಸೋಮಶೇಖರ್ ಹೊರಟುಹೊದರು.
ಸಾವಿನ ಸಂಖ್ಯೆ ಮುಚ್ಚಿಡಲಾಗಿದೆ ಎಂದು ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರೋಹಣಿ ಸಿಂಧೂರಿ ವಿರುದ್ದ ಗಂಭೀರ ಆರೋಪ ಕೇಳಿಬಂದಿತ್ತು. ಸಾರಾ ಮಹೇಶ್ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ರು.