ಶೋ ನಿಲ್ಲಿಸಿದ ಸರಸ್ವತಿ ಚಿತ್ರಮಂದಿರ! ಇನ್ನು ನೆನಪು ಮಾತ್ರ

1 min read

ಮೈಸೂರು,ಸೆ.21-ಕೊರೊನಾ ಹಾಗೂ ಲಾಕ್ ಡೌನ್ ಸಂಕಷ್ಟದಿಂದಾಗಿ ಅನೇಕ ಚಿತ್ರಮಂದಿರಗಳು ಶಾಶ್ವತವಾಗಿ ಪ್ರದರ್ಶನ ನಿಲ್ಲಿಸಿದೆ. ಇದೀಗ ಸಾಕಷ್ಟು ವರ್ಷಗಳಿಂದ ಸಿನಿಪ್ರಿಯರಿಗೆ ಮನರಂಜನೆ ನೀಡುತ್ತಿದ್ದ ನಗರದ ಮತ್ತೊಂದು ಚಿತ್ರಮಂದಿರ ತನ್ನ ಪ್ರದರ್ಶನವನ್ನು ನಿಲ್ಲಿಸಲಿದೆ.
ನಗರದ ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರದ ಬಾಗಿಲು ಮುಚ್ಚುತ್ತಿದ್ದು, ಚಿತ್ರಮಂದಿರ ಇನ್ನು ನೆನಪಾಗಿ ಉಳಿಯಲಿದೆ.
ಬಹುತೇಕ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳೇ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.
ಕೊರೊನಾ ಲಾಕ್ ಡೌನ್ ನಿಂದಾಗಿರುವ ನಷ್ಟ ಹಾಗೂ ಸಿನಿಮಾ ಪ್ರದರ್ಶನವಿಲ್ಲದ ಕಾರಣದಿಂದ ಚಿತ್ರಮಂದಿರದ ಬಾಗಿಲು ಮುಚ್ಚಲು ಮಾಲೀಕರು ನಿರ್ಧರಿಸಿದ್ದಾರೆ.
ಕಳೆದ ಒಂದು ವರ್ಷ ಅವಧಿಯಲ್ಲಿ ಮೈಸೂರಿನ ಮೂರು ಪ್ರತಿಷ್ಠಿತ ಚಿತ್ರಮಂದಿರಗಳು ಬಂದ್ ಆಗಿವೆ. ಶಾಂತಲಾ, ಲಕ್ಷ್ಮಿ ಚಿತ್ರಮಂದಿರದ ಬಳಿಕ ಇದೀಗ ಸರಸ್ವತಿ ಚಿತ್ರಮಂದಿರವೂ ಬಂದ್ ಆಗುತ್ತಿರುವುದು ಸಿನಿ ರಸಿಕರಿಗೆ ಬೇಸರ ಮೂಡಿಸಿದೆ.

About Author

Leave a Reply

Your email address will not be published. Required fields are marked *