ಕೋರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ವೈಯಕ್ತಿಕವಾಗಿ 25,000 ಸಹಾಯಧನ ನೀಡಿದ ಶಾಸಕ ಸಾ.ರಾ ಮಹೇಶ್
1 min readಮೈಸೂರು: ಕೋರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ವೈಯಕ್ತಿಕವಾಗಿ ಶಾಸಕ ಸಾ.ರಾ.ಮಹೇಶ್ 25000 ಸಹಾಯಧನ ನೀಡಿದ್ದಾರೆ.
ಇಂದು ಕೆ.ಆರ್.ನಗರದ ದೇವೇಗೌಡ ಸಮುದಾಯ ಭವನದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಕೊರೋನಾದ ಸಾವಿನಿಂದ ನೊಂದ ಕುಟುಂಬಗಳಿಗೆ ಕಂಬನಿ ಮಿಡಿದಿರುವ ಶಾಸಕ ಸಾರಾ ಮಹೇಶ್, ವೈಯಕ್ತಿಕವಾಗಿ 25000 ಹಣವನ್ನು ಸಹಾಯಧನವಾಗಿ ನೀಡಿದ್ದಾರೆ. ಇದರ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಮಾದರಿಯಾಗಿ ನಿಲ್ಲುತ್ತಿದ್ದಾರೆ ಕೆ ಆರ್ ನಗರ ಕ್ಷೇತ್ರದ ಶಾಸಕ.
-ಈ ವೇಳೆ ಮಾತನಾಡಿದ ಶಾಸಕರು ನಾವು ಯಾವುದೇ ಜಾತಿ ಭೇದ ನೋಡದೆ ಸಹಕಾರ ನೀಡುತ್ತಿದ್ದೇವೆ. ನಾವು ಮಾಡಿರುವ ಕೆಲಸಗಳು ರಾಜ್ಯದಲ್ಲಿ ಮಾದರಿಯಾಗಿ ನಮ್ಮನ ಅನುಕರಣೆ ಮಾಡುವಂತಾಗಿದೆ. ನನ್ನ ಕೈಲಾದ ಅಳಿಲು ಸೇವೆ ನಾನು ಮುಂದು ಕೂಡ ನಡೆಸುತ್ತೇನೆ. ಆದರೆ ಜಿಲ್ಲಾಡಳಿತ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ. ಇದಕ್ಕೆ ಕಾರಣ ಹಿಂದೆ ಇದ್ದ ಜಿಲ್ಲಾಧಿಕಾರಿ. ಅದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೆ ಹೊರತು ಬೇರೆ ವೈಯಕ್ತಿಕವಾಗಿ ಅಲ್ಲ ಎಂದು ತಿಳಿಸಿದರು. ಸೋಶಿಯಲ್ ಮೀಡಿಯಾಗಳಲ್ಲಿ ನಾನು ಮಾಡುತ್ತಿರುವ ಸೇವೆಯನ್ನು ಕೇವಲ ನನ್ನ ಜೊತೆಯಲ್ಲಿದ್ದವರಿಗೆ ಮಾತ್ರ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಅದು ಸುಳ್ಳು ನಾನು ಎಲ್ಲರಿಗೂ ನೀಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ರು.