ಮೈಸೂರಿನಲ್ಲಿ ಆನ್’ಲೈನ್ ಕ್ಲಾಸ್’ನಲ್ಲಿ ವಿದ್ಯಾರ್ಥಿಗಳ ಕೀಟಲೆ
1 min readಮೈಸೂರು: ಆನ್’ಲೈನ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಕೀಟಲೆಯಿಂದ ಪಾಠಕ್ಕೆ ತೊಂದರೆಯಾಗುತ್ತಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯೊಂದು ಸೋಷಿಯಲ್ ಮೀಡಿಯದಲ್ಲಿ ವಿಡಿಯೋ ಪೋಸ್ಟ್ ಮಾಡಿದೆ.
ಆನ್’ಲೈನ್ ಕ್ಲಾಸ್ ನಲ್ಲಿ ಉಪನ್ಯಾಸಕರಿಗೆ ತರಗತಿ ಮಾಡಲು ಬಿಡದೆ ಉಪನ್ಯಾಸದ ಮಧ್ಯ ಹಾಡುಗಳನ್ನು ಹಾಕಿ ವಿದ್ಯಾರ್ಥಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಮೈಸೂರಿನ ಮಹಾಜನ ಕಾಲೇಜು ಆಡಳಿತ ಮಂಡಳಿ ಹೇಳಿದೆ.
ಕೆಲ ವಿದ್ಯಾರ್ಥಿಗಳ ಕೀಟಲೆಯಿಂದ ಉಳಿದ ವಿದ್ಯಾರ್ಥಿಗಳಿಗೆ ಪಾಠಕ್ಕೆ ತೊಂದರೆ ಆಗುತ್ತಿದೆ. ಕೆಲ ವಿದ್ಯಾರ್ಥಿಗಳು ಬೇಕಂತಲೆ ತೊಂದರೆ ಕೊಡುತ್ತಾರಂತೆ. ವಿದ್ಯಾರ್ಥಿಗಳ ಕೀಟಲಗೆ ಉಪನ್ಯಾಸಕರು, ಶಿಕ್ಷಕರು ಹೈರಾಣವಾಗಿದ್ದಾರೆ.
ಸದ್ಯ ಉಪನ್ಯಾಸಕರಿಗೆ ತೊಂದರೆ ಕೊಟ್ಟಿರುವ ವೀಡಿಯೋವನ್ನ ಮಹಾಜನ ಕಾಲೇಜು ಆಡಳಿತ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಲ್ಲದೆ ವಿದ್ಯಾರ್ಥಿಗಳು ಈ ರೀತಿ ಮಾಡಬಾರದು ಎಂದು ಮನವಿ ಮಾಡಿದೆ.