ಮುಂಬೈಗೆ ಹಾರಿದ ಸಮರ್ಜಿತ್ ಲಂಕೇಶ್: ಅತೀ ದೊಡ್ಡ ಪ್ರೊಡಕ್ಷನ್ ಜೊತೆ ಸಿನಿಮಾ

1 min read

ಸಿನಿಮಾ: ಸಮರ್ಜಿತ್ ಲಂಕೇಶ್, ಗೌರಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟ. ದೊಡ್ಡ ಸ್ಟಾರ್ ಆಗಬೇಕು ಎಂದು ಕನಸನ್ನು ಹೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸಮರ್ಜಿತ್ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದ್ಭುತ ಅಭಿನಯದ ಮೂಲಕ ಫ್ಯೂಚರ್ ಸ್ಟಾರ್ ಎನ್ನುವ ಭರವಸೆ ಮೂಡಿಸಿರುವ ನಟ ಸಮರ್ಜಿತ್ ಖ್ಯಾತ ನಿರ್ದೇಶಕ, ಪತ್ರಕರ್ತ ಇಂದ್ರಿಜಿತ್ ಲಂಕೇಶ್ ಅವರ ಪುತ್ರ. ಗೌರಿ ಸಿನಿಮಾದ ನಟನೆಗಾಗಿ ಸಮರ್ಜಿತ್ ಅವರಿಗೆ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಬಂದಿದೆ.

ಅವಾರ್ಡ್ ಪಡೆದ ಖುಷಿಯಲ್ಲಿರುವ ಹ್ಯಾಂಡಮ್ ಹಂಕ್ ಸಮರ್ಜಿತ್ ಬಾಲಿವುಡ್‌ಗೆ ಹಾರಲು ಸಜ್ಜಾಗಿದ್ದಾರೆ. ಹಿಂದಿ ಸಿನಿಮಾರಂಗಮಾತ್ರವಲ್ಲ ಪಕ್ಕದ ತೆಲುಗು ಮತ್ತು ತಮಿಳಿನಿಂದನೂ ಆಫರ್‌ಗಳು ಬರುತ್ತಿದ್ದು ಪರಭಾಷೆಯ ಕಡೆ ಸಮರ್ಜಿತ್ ಗಮನ ಹರಿಸುತ್ತಿದ್ದಾರೆ.
ಹೌದು, ಸಮರ್ಜಿತ್ ಹಿಂದಿ ಸಿನಿಮಾರಂಗಕ್ಕೆ ಕಾಲಿಡಲು ತಯಾರಾಗಿದ್ದಾರೆ. ಈಗಾಗಲೇ ಹಿಂದಿಯ ದೊಡ್ಡ ಪ್ರೊಡಕ್ಷನ್ ಹೌಸ್ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಮರ್ಜಿತ್ ಜೊತೆ ಸಿನಿಮಾ ಮಾಡಲು ಮುಂದಾಗಿದೆ ಎನ್ನುವ ಮಾತು ಕೇಳಿಬಂದಿದೆ.

ಈಗಾಗಲೇ ಧರ್ಮ ಪ್ರೊಡಕ್ಷನ್ ಕಡೆಯಿಂದ ಕರೆ ಬಂದಿದ್ದು ಸಮರ್ಜಿತ್ ಮುಂಬೈಗೆ ಹಾರಿದ್ದಾರೆ. ಕರಣ್ ಜೊಹರ್ ಸಂಸ್ಥೆ ಜೊತೆ ಮಾತುಕತೆ ನಡೆಸಿರುವ ಸಮರ್ಜಿತ್ ಹಿಂದಿಯಲ್ಲಿ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.

ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಹಿಂದಿ ನಿರ್ಮಾಣ ಸಂಸ್ಥೆಗಳು ಅದರಲ್ಲೂ ಕರಣ್ ಜೋಹರ್ ಸೌತ್ ಸಿನಿಮಾರಂಗದ ಕಡೆ ಹೆಚ್ಚು ಇಂಟ್ರೆಸ್ಟ್ ತೋರಿಸುತ್ತಿದ್ದಾರೆ. ಒಂದುವೇಳೆ ಸಮರ್ಜಿತ್ ಲಂಕೇಶ್ ಅವರಿಗೆ ಸಿನಿಮಾ ನಿರ್ಮಾಣ ಮಾಡಿದರೆ ಮೊದಲ ಬಾರಿಗೆ ಕರಣ್ ಸಂಸ್ಥೆ ಕನ್ನಡ ನಟನ ಜೊತೆ ಸಿನಿಮಾ ಮಾಡಿದಂತೆ ಆಗಲಿದೆ.

ಇನ್ನೂ ವಿಶೇಷ ಎಂದರೆ ತಮಿಳಿನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಸಂಸ್ಥೆ ಕೂಡ ಸಮರ್ಜಿತ್ ಗೆ ಸಿನಿಮಾ ಮಾಡಲು ಮುಂದಾಗಿರುವ ವಿಚಾರ ಹೊರಬಿದ್ದಿದೆ. ಈಗಾಗಲೇ ಲೈಕಾ ಸಂಸ್ಥೆ ನಿಖಿಲ್ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟಿದೆ. ಆ ಸಿನಿಮಾ ಪೂರ್ಣಗೊಳ್ಳುವ ಮೊದಲೇ ಲೈಕಾ ಸಂಸ್ಥೆ ಕನ್ನಡದ ಮತ್ತೊಬ್ಬ ಸ್ಟಾರ್ ಸಮರ್ಜಿತ್‌ಗೆ ಸಿನಿಮಾ ಮಾಡಲು ನಿರ್ಧರಿಸಿದ್ದು ಈಗಾಗಲೇ ಮಾತುಕತೆ ಹಂತದಲ್ಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಒಟ್ನಲ್ಲಿ ಕನ್ನಡದ ಯುವ ನಟನೊಬ್ಬನಿಗೆ ಪರಭಾಷಯಿಂದ ಅದರಲ್ಲೂ ದೊಡ್ಡ ದೊಡ್ಡ ಪ್ರೊಡಕ್ಷನ್ ಗಳು ಸಿನಿಮಾ ಮಾಡಲು ಮುಂದಾಗಿರುವುದು ಖುಷಿಯ ವಿಚಾರ. ಸಮರ್ಜಿತ್ ದೊಡ್ಡ ಸ್ಟಾರ್ ಆಗಿ ಮೆರೆಯಲಿ ಎನ್ನುವುದೇ ಅಭಿಮಾನಿಗಳ ಆಷಯ.

About Author

Leave a Reply

Your email address will not be published. Required fields are marked *