ತನ್ನ ಹುಟ್ಟುಹಬ್ಬದಂದು ಮೈಸೂರು ಮೃಗಾಲಯದಲ್ಲಿ ಕಿಂಗ್ ಕೋಬ್ರಾ ದತ್ತು ಪಡೆದ ಯುವತಿ
1 min readಮೈಸೂರು: ನವ್ಯ ಎಂಬ ಯುವತಿ ಆಕೆಯ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರು ಮೃಗಾಲಯದಲ್ಲಿ ಕಿಂಗ್ ಕೋಬ್ರಾವನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಈ ಮೂಲಕ ಅರ್ಥಪೂರ್ಣವಾದ ಹುಟ್ಟುಹಬ್ಬ ಆಚರಿಸಿ ಸರಳತೆ ಮೆರೆದಿದ್ದಾರೆ.
ಕೊರೋನಾ ಕಾರಣ ಮೈಸೂರು ಮೃಗಾಲಯವು ಸೇರಿದಂತೆ ರಾಜ್ಯದಲ್ಲಿರುವ ಮೃಗಾಲಯಗಳಲ್ಲಿ ಪ್ರವಾಸಿಗರ ಆಗಮನ ಹಾಗೂ ಆದಾಯ ಕಡಿಮೆಯಾಗಿರುವ ಸಂದರ್ಭದಲ್ಲಿ ಮೃಗಾಲಯದ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಪ್ರೇಮಿಗಳು ತಮ್ಮ ಜನ್ಮದಿನ ಹಾಗೂ ವಿಶೇಷ ದಿನಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಮುಖಾಂತರ ಪ್ರಾಣಿಗಳಿಗೆ ನೆರವಾದರೆ ಮೃಗಾಲಯಕ್ಕೆ ಅಲ್ಪ ಪ್ರಮಾಣದ ನೆರವಾದರು ಸಹ ಸಿಗಲಿದೆ.