ಕೇರಳದ ವೈಯನಾಡಿನಲ್ಲಿ ಭಾರೀ ಮಳೆ: ಭರ್ತಿಯತ್ತ ಕಬಿನಿ ಜಲಾಶಯ
1 min readಮೈಸೂರು: ಕೇರಳದ ವೈಯನಾಡಿನಲ್ಲಿ ಭಾರೀ ಮಳೆ ಹಿನ್ನಲೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಭರ್ತಿಯತ್ತ ಸಾಗಿದೆ.
ದಿನೇದಿನೇ ಹೆಚ್ಚುತ್ತಿರುವ ಒಳ ಹರಿವಿನ ಪ್ರಮಾಣ ಕಬಿನಿ ಭರ್ತಿಯಾಗುತ್ತಿದೆ. ಈ ಮೂಲಕ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯವೆಂಬ ಖ್ಯಾತಿ ಪಡೆಯಲಿದೆ.
- ಜಲಾಶಯದ ಗರಿಷ್ಟ ಮಟ್ಟ 2284 ಅಡಿಗಳು.
- ಇಂದಿನ ಮಟ್ಟ 2278.31 ಅಡಿಗಳು
- ಜಲಾಶಯಕ್ಕೆ ಒಳ ಹರಿವು 20749 ಸಾವಿರ ಕ್ಯುಸೆಕ್ಸ್.
ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನಲೆ. ನದಿಗೆ ಹೊರ ಹರಿವು ಹೆಚ್ಚಳ ಮಾಡಲಾಗಿದೆ. 10,000 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಹೊರ ಹರಿವು ಹೆಚ್ಚಳ ಹಿನ್ನಲೆ ಕಪಿಲೆ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಲಾಗಿದೆ.
ಒಳ ಹರಿವಿನ ಪ್ರಮಾಣ ತಗ್ಗದಿದ್ದರೆ ಇನ್ನು ಒಂದು ವಾರದಲ್ಲಿ ಜಲಾಶಯ ಭರ್ತಿ ಸಾಧ್ಯತೆ ಇದೆ.
ಕಬಿನಿ ಜಲಾನಯನ ಪಾತ್ರದಲ್ಲಿ ಪ್ರವಾಹ ಭೀತಿ:
ಕಬಿನಿ ಡ್ಯಾಂಗೆ ದಿಢೀರ್ ಒಳ ಹರಿವು ಹೆಚ್ಚಳ ಹಿನ್ನಲೆ ಎಚ್.ಡಿ.ಕೋಟೆ, ನಂಜನಗೂಡು ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. 20 ಸಾವಿರ ಕ್ಯೂಸೆಕ್ಸ್ ಒಳ ಹರಿವಿನ ಹೆಚ್ಚಳವಾಗಿದ್ದು ಜಲಾಶಯ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿ ಇದೆ.
ಒಳ ಹರಿವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಹಿನ್ನಲೆ ಜಲಾಶಯದಿಂದ 10 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗಿದೆ. ಹೀಗಾಗಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ನೀರಾವರಿ ಇಲಾಖೆಯಿಂದ ತಗ್ಗು ಪ್ರದೇಶದಲ್ಲಿರುವವರಿಗೆ ಸ್ಥಳಾಂತರಕ್ಕೆ ಸೂಚನೆ ಕೊಟ್ಟಿದೆ.