ಮೈಸೂರಿನಲ್ಲಿ ಸೋಮವಾರದಿಂದ KSRTC ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್!
1 min readಮೈಸೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳಿಂದ ಸೋಮವಾರದಿಂದಲೇ ಸಾರಿಗೆ ವ್ಯವಸ್ಥೆ ಶುರುವಾಗಲಿದೆ ಎಂದು ಮೈಸೂರಿನ ವಿಭಾಗೀಯ ನಿಯಂತ್ರಣ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಿರೋ ಅಧಿಕಾರಿಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಕಾರ್ಯಾರಂಭ ಮಾಡಲು ಸೂಚಿಸಿದೆ. ಅದರಂತೆ ನಗರ ಮತ್ತು ಗ್ರಾಮಾಂತರ ವಿಭಾಗಗಳಿಂದ ಬಸ್ ಸಂಚಾರ ಶುರುವಾಗಲಿದೆ. ಅಲ್ಲದೆ ಮೂರನೇ ಕ್ಯಾಟಗರಿ ಇಂದ 2ನೇ ಕ್ಯಾಟಗರಿಗೆ ಮೈಸೂರು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಸೂಚನೆ ಏನು?
- ಕಡ್ಡಾಯವಾಗಿ ಸಾರಿಗೆ ಚಾಲಕರು ನೆಗಿಟಿವ್ ವರದಿ ತರಬೇಕು.
- ವಾಕ್ಸಿನ್ ಪ್ರತಿಯೊಬ್ಬ ಸಿಬ್ಬಂದಿ ಹಾಕಿಸಲಾಗಿದ್ದು ಆತಂಕ ಬೇಡ.
- ಪ್ರತಿಯೊಬ್ಬ ಸಿಬ್ಬಂದಿ ಕರ್ತವ್ಯದ ವೇಳೆ ಮಾಸ್ಕ್ ಧರಿಸಬೇಕು.
- ಬಸ್ ಒಂದು ರೂಟ್ ಮುಗಿಸಿದ ಬಳಿಕ ಸ್ಯಾನಿಟೈಸ್ ಆಗಬೇಕು.
- ಸರ್ಕಾರದ ಸೂಚನೆಯಂತೆ ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ.
ಈ ಮೇಲ್ಕಂಡ ಸೂಚನೆ ಜೊತೆಗೆ ಪ್ರಯಾಣಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ.