ಮೈಸೂರು ವಿಭಾಗದಿಂದ ಗಾಂಧಿ ಜಯಂತಿ ಆಚರಣೆ

1 min read

ಮೈಸೂರು: ನೈಋತ್ಯ ರೈಲ್ವೆ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ಇಂದು ಮಹಾತ್ಮ ಗಾಂಧಿಯವರಿಗೆ ಅವರ 152 ನೇ ಜನ್ಮ ದಿನಾಚರಣೆಯಂದು ರೈಲ್ವೆ ಕ್ರೀಡಾ ಮೈದಾನದ ಬಳಿ ಇರುವ ಗಾಂಧಿ ವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಗರ್ವಾಲ್ ರವರು, ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಸಚಿವಾಲಯವು ಸರ್ಕಾರದ ಅತಿದೊಡ್ಡ ಸ್ವಚ್ಛತಾ ಕಾರ್ಯಕ್ರಮವಾದ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಹಲವು ರೀತಿಯಲ್ಲಿ ಉತ್ತೇಜನ ನೀಡಲು ಮುಂದಾಗಿದೆ. ಸ್ವಚ್ಛತೆಗಾಗಿ ರೈಲುಗಳಲ್ಲಿ ನೂತನವಾದ ನೈರ್ಮಲ್ಯ ಕಾರ್ಯಕ್ರಮಗಳನ್ನು ಪರಿಚಯಿಸುವುದರಿಂದ ಹಿಡಿದು ಹಸಿರು ರೈಲು ಕಾರಿಡಾರ್‌ಗಳವರೆಗೆ ಮತ್ತು ಹಳಿಗಳನ್ನು ‘ಶೂನ್ಯ ವಿಸರ್ಜನೆ’ ಅಥವಾ ‘ವಿಸರ್ಜನಾ ಮುಕ್ತ’ ವಲಯವನ್ನಾಗಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ರೈಲ್ವೆಯು ಯಾವ ಪ್ರಯತ್ನವನ್ನೂ ಬಿಟ್ಟಿಲ್ಲ ಎಂದು ಹೇಳಿದರು.

‘ಸ್ವಚ್ಛ ರೈಲು-ಸ್ವಚ್ಛ ಭಾರತ’ದ ಧ್ಯೇಯವನ್ನು ಗಮನದಲ್ಲಿಟ್ಟುಕೊಂಡು, ಮೈಸೂರು ವಿಭಾಗವು ತನ್ನ ಸಂಪೂರ್ಣ ವಿಭಾಗದಲ್ಲಿ 16 ನೆಯ ಸೆಪ್ಟೆಂಬರ್ 2021 ರಿಂದ 2 ನೆಯ ಅಕ್ಟೋಬರ್ 2021 ರವರೆಗೆ ಹದಿನೈದು ದಿನಗಳ ಕಾಲ ವಿಶೇಷ ಸ್ವಚ್ಛತಾ ಅಭಿಯಾನ –‘ಸ್ವಚ್ಛತಾ ಪಾಕ್ಷಿಕ’ವನ್ನು ಆಚರಿಸಿತು.

ಪಾಕ್ಷಿಕದ ಪ್ರತಿಯೊಂದು ದಿನವನ್ನೂ ಸ್ವಚ್ಛ ಆಹಾರ, ಶುದ್ಧ ನೀರು, ಸ್ವಚ್ಛ ವಸತಿ ವಸಾಹತುಗಳು, ಸ್ವಚ್ಛ ನಿಲ್ದಾಣಗಳು, ಸ್ವಚ್ಛ ಶೌಚಾಲಯಗಳು, ಸ್ವಚ್ಛ ಕೆಲಸದ ಸ್ಥಳ ಮತ್ತು ಸಾರ್ವಜನಿಕರೊಂದಿಗೆ ಸ್ವಚ್ಛತೆಯ ಬಗ್ಗೆ ಸಂವಾದದಂತಹ ವಿಭಿನ್ನ ವಿಶೇಷ ‘ಸ್ವಚ್ಛ ನಿರೂಪಣೆ’ ಗಳೊಂದಿಗೆ ಆಚರಿಸಲಾಯಿತು. ಜಾಥಾದ ಆರಂಭವು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ವಿಷಯವಾಗಿದ್ದೂ, ಇದರಲ್ಲಿ ರೈಲ್ವೆ ಸಿಬ್ಬಂದಿ ಮೇಲಿನವುಗಳನ್ನು ಶುದ್ಧವಾಗಿ ಮತ್ತು ಸ್ವಚ್ಛವಾಗಿಡಲು ಪ್ರತಿಜ್ಞೆ ಮಾಡಿದರು ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ವಿಭಾಗದಾದ್ಯಂತ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು ಎಂದು ವಿಭಾಗೀಯ ವ್ಯವಸ್ಥಾಪಕರು ಹೇಳಿದರು.


ತದನಂತರ, ಅವರು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ಬೋದಿಸಿದರು. ನಿಲ್ದಾಣದಲ್ಲಿನ ಸ್ವಚ್ಛತಾ ಸಿಬ್ಬಂದಿಯನ್ನು ಅವರ ಸಮರ್ಪಿತ ಕೆಲಸಕ್ಕಾಗಿ ಗೌರವಿಸಲಾಯಿತು. ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡಲು ರೈಲು ಪ್ರಯಾಣಿಕರಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು. ಸ್ವಚ್ಛ ಭಾರತ ಕುರಿತ ಆನ್‌ಲೈನ್ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಂತಿಮವಾಗಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೈಸೂರು ರೈಲ್ವೆ ನಿಲ್ದಾಣದಲ್ಲಿ ‘ಶ್ರಮದಾನ’ದಲ್ಲಿ ಭಾಗವಹಿಸಿದರು.

About Author

Leave a Reply

Your email address will not be published. Required fields are marked *