ಮೃತಪಟ್ಟ ಪ್ರೀತಿಯ ಶ್ವಾನಕ್ಕೆ ಅಂತಿಮ ವಿಧಿವಿಧಾನ ನಡೆಸಿದ ಕುಟುಂಬಸ್ಥರು
1 min readಮೈಸೂರು: ಮೃತಪಟ್ಟ ಪ್ರೀತಿಯ ಶ್ವಾನಕ್ಕೆ ಕುಟುಂಬಸ್ಥರು ಅಂತಿಮ ವಿಧಿವಿಧಾನ ನಡೆಸಿರುವ ಘಟನೆ ಮೈಸೂರಿನ ರಾಮಾನುಜ ರಸ್ತೆಯ ವಿನಯ್’ ಪವನ್ ಮನೆಯಲ್ಲಿ ನಡೆದಿದೆ.
ತನ್ನ ಮನೆಯ ಸಾಕು ನಾಯಿ ಸೋಫಿ ಹೆಣ್ಣು ನಾಯಿ ಮೃತಪಟ್ಟಿತ್ತು. ಕಳೆದೊಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೋಫಿ ನಾಯಿ ಇಂದು ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟಿದೆ.
ಈ ವೇಳೆ ಸೋಫಿಗೆ ಅಂತಿಮ ವಿಧಿವಿಧಾನದ ಮೂಲಕ ಅಂತಿಮ ಸಂಸ್ಕಾರ ನಡೆಸಲಾಗಿದೆ. ಪೂಜೆ ನೆರವೇರಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆದಿದೆ. ಸೋಫಿ ಸಾವಿಗೆ ಕುಟುಂಬಸ್ಥರು ಕಣ್ಣೀರಾಕಿದ್ದಾರೆ. 11 ದಿನದ ಕಾರ್ಯ ಮಾಡಲು ಸಹ ಸಿದ್ದತೆ ನಡೆಸಲಾಗಿದೆ. ವೀರಶೈವ ಪದ್ಧತಿಯಂತೆ ಕಾರ್ಯ ಕುಟುಂಬಸ್ಥರು ನೆರವೇರಿಸಿದ್ದಾರೆ.