ಸರ್ಕಾರಕ್ಕೆ ಪಂಚೇಂದ್ರಿಯ ಇದ್ದರೆ ಈ ಇಬ್ಬರು ಅಧಿಕಾರಿಗಳ ವರ್ಗಾವಣೆ ಮಾಡಿ: ರೈತ ಮುಖಂಡರ ಆಕ್ರೋಶ
1 min readಮೈಸೂರು: ಮೈಸೂರು ಐಎಎಸ್ ಗಳ ಜಟಾಪಟಿ ವಿಚಾರ. ಇಂದು ಕೂಡ ಅಧಿಕಾರಿಗಳ ಪರವಿರೋಧ ಪ್ರತಿಭಟನೆ ಮುಂದುವರೆದಿದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಮೈಸೂರಿನ ರೈತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ಪ್ರಾದೇಶಿಕ ಆಯುಕ್ತರ ಕಾರ್ಯಲಯದ ಮುಂಭಾಗ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು. ಮೈಸೂರಿನಲ್ಲಿ ಕೊರೊನಾ ಸೂತಕ ಇದೆ. ಇಂತ ಸಂಧರ್ಭದಲ್ಲಿ ಇಬ್ಬರು ಐಎಎಸ್ ಗಳು ಕಿತ್ತಾಟವಾಡುತ್ತಿದ್ದಾರೆ.
ಸಾರ್ವಜನಿಕ ಮನರಂಜನೆ ನೀಡುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಇದು ಬೇಕಿತ್ತ. ರಾಜ್ಯ ಸರ್ಕಾರಕ್ಕೆ ಕಣ್ಣು ಕಿವಿ ಇದ್ದರೆ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ. ಕೋವಿಡ್ ನಿರ್ವಹಣೆ ಮಾಡಲಿ. ಸಿಎಸ್ ಆರ್ ಫಂಡನ್ನು ನೇರವಾಗಿ ಸರ್ಕಾರಗಳಿಗೆ ನೀಡಬೇಡಿ, ಇದನ್ನು ನೇರವಾಗಿ ನೀಡಿ ಅಂತ ಮೈಸೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಮೊದಲು ಇವರು ಕೋಳಿ ಜಗಳ ಮಾಡೋದು ಮೊದಲು ಬಿಡಿ. ದುಂದುವೆಚ್ಚ ಬಿಟ್ಟು ಮೈಸೂರಿನಲ್ಲಿ ಕೆಲಸ ಮಾಡಿ. ಸರ್ಕಾರಕ್ಕೆ ಪಂಚೇಂದ್ರಿಯ ಇದ್ದರೆ ಇವರಿಗೆ ಬೇರೆ ಕಡೆ ವರ್ಗಾವಣೆ ಮಾಡಿ. ಈ ಇಬ್ಬರು ಅಧಿಕಾರಿಗಳ ಅವಶ್ಯಕತೆ ನಮಗೆ ಇಲ್ಲ.
ಮೈಸೂರಿಗರು ಕರೋನಾದಿಂದ ನಲಗುತ್ತಿದ್ದಾರೆ. ಈ ಇಬ್ಬರ ಜಗಳದಿಂದ ಮೈಸೂರಿಗೆ ಕೆಟ್ಟ ಹೆಸರು ಬರುತ್ತಿದೆ. ಮೈಸೂರಿನಲ್ಲಿ ಅಧಿಕಾರಿಗಳ ವಿರುದ್ಧ ರೈತ ಮುಖಂಡ ಶಾಂತಕುಮಾರ್ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.