ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರು 24 ಅಲ್ಲ 28 ಮಂದಿ: ಸಿದ್ದರಾಮಯ್ಯ
1 min readಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತದಲ್ಲಿ 28 ಮಂದಿ ಆಮ್ಲಜನಕ ಕೊರತೆಯಿಂದ ಸತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇಂದು ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದಿದ್ದೇವೆ. ನಿನ್ನೆ ಸುಧಾಕರ್ ಬಂದು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ. ಅಧಿಕಾರಿಗಳಿಂದ ವಸ್ತುಸ್ಥಿತಿ ಮಾಹಿತಿ ಪಡೆದಿದ್ದೇವೆ 28 ಮಂದಿ ಆಮ್ಲಜನಕ ಕೊರತೆಯಿಂದ ಸತ್ತಿದ್ದಾರೆ.
ಚಾಮರಾಜನಗರ ನಗರಕ್ಕೆ ರೋಗಿಗಳ ಆಧಾರದ ಮೇಲೆ ಪ್ರತಿಧಿನ350 ಸಿಲಿಂಡರ್ ಬೇಕು. ಆದರೆ ಭಾನುವಾರ 2 ಗಂಟೆ ಮೇಲೆ 126 ಮಾತ್ರ ಬಂದಿದೆ. 200 ಸಿಲಿಂಡರ್ ಸಪ್ಲೆ ಆಗಿಲ್ಲ. ಮಧ್ಯಾಹ್ನ ದಿಂದ ಮದ್ಯರರಾತ್ರಿ ವರೆಗೆ 24 ಜನ ಸತ್ತಿದ್ದಾರೆ. ಅವರೆಲ್ಲ ಆಕ್ಸಿಜನ್ ಕೊರತೆಯಿಂದ ಸತ್ತಿದ್ದಾರೆ ಅನ್ನೋದನ್ನ ಡೀನ್, ಡಿಎಸ್ ಹಾಗೂ ಡಿಸಿ ಒಪ್ಪಿಕೊಂಡಿದ್ದಾರೆ.
ಮಧ್ಯರಾತ್ರಿ 2 ಗಂಟೆ ವರೆಗೂ ಆಕ್ಸಿಜನ್ ಸಿಗಲಿಲ್ಲ. ಮಧ್ಯಾಹ್ನ 2 ಗಂಟೆ ವರೆಗೆ ಸಿಲಿಂಡರ್ ಇತ್ತು. ನಂತರ ಆಕ್ಸಿಜನ್ ಕೊಡಲಾಗದೆ ಆಕ್ಸಿಜನ್ ಇಲ್ಲದೆ ರೋಗಿಗಳು ಸತ್ತಿದ್ದಾರೆ. ಜವಾಬ್ದಾರಿ ಮಂತ್ರಿ ಸತ್ಯ ಮುಚ್ಚಿಟ್ಟು ಮಾತನಾಡಿರೋದು ಖಂಡನೀಯ ಸರ್ಕಾರ ಆಕ್ಸಿಜನ್ ಸಪ್ಲೆ ಮಾಡಬೇಕಿತ್ತು. ಈಗಾಗಲೇ ಆಸ್ಪತ್ರೆ ರೋಗಿಗಳ ಸಂಖ್ಯೆ ತುಂಬಿದೆ. ಮುಂದೆ ಇದು ಜಾಸ್ತಿ ಆಗಲಿದೆ. ಇದಕ್ಕೆ ಜಿಲ್ಲಾಡಳಿತ, ಸರ್ಕಾರ ಇದಕ್ಕೆ ಸಿದ್ದತೆ ಮಾಡಿಕೊಂಡಿಲ್ಲ ಎಂದು ಕಿಡಿ ಕಾರಿದರು.
ಮೈಸೂರಿನಂತೆ ಚಾಮರಾಜನಗರ ಮಂಡ್ಯ, ಮಡಿಕೇರಿಗೂ ಕೊಡಬೇಕಲ್ಲ. ಮೈಸೂರು ಚಾಮರಾಜನಗರ ಡಿಸಿ ಬೇರೆ ಬೇರೆ ಹೇಳಿಕೆ ಕೊಡುತ್ತಿದ್ದಾರೆ. ಮೈಸೂರು ಡಿಸಿ ಮೈಸೂರು ಜಿಲ್ಲೆಗೆ ಪೂರ್ಣ ಆದ ಮೇಲೆ ಬೇರೆ ಜಿಲ್ಲೆಗೆ ಕೊಡಿ ಎಂದಿದ್ದಾರೆ ಎಂಬ ದೂರು ಇದೆ. 28 ಜನರ ಆತ್ಮಕ್ಕೆ ಶಾಂತಿ ಸಿಗಬೇಕು. ತಪಿತಸ್ಥರಿಗೆ ಶಿಕ್ಷೆ ಆಗಬೇಕು. ನ್ಯಾಯಾಂಗ ತನಿಖೆ ಆಗಬೇಕು. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ರಾಜ್ಯ ಸರ್ಕಾರ ಇದರ ಹೊಣೆಗಾರಿಕೆ ಹೊರಬೇಕು:
ಸರ್ಕಾರ ಕೂಡ ಜಿಲ್ಲೆಗೆ ಅಗತ್ಯ ಇರುವಷ್ಟು ಆಕ್ಸಿಜನ್ ಒದಗಿಸಬೇಕು. ಮುಖ್ಯಮಂತ್ರಿ, ಆರೋಗ್ಯ ಮಂತ್ರಿ ಹಾಗೂ ಜಿಲ್ಲಾ ಮಂತ್ರೊ ಹೊಣೆಗಾರಿಕೆ ಹೊರಬೇಕು ಅವರಿಗೆ ಅಧಿಕಾರದಲ್ಲಿಮುಂದುವರೆಯುವ ನೈತಿಕತೆ ಇಲ್ಲ. ನವೆಂಬರ್ ನಲ್ಲೇ ಎರಡನೇ ಅಲೆ ಬಗ್ಗೆ ಹೇಳಿದ್ರೂ ಉದಾಸೀನ ಮಾಡಿದ್ರು. ಜಿಲ್ಲಾ ಮಂತ್ರಿ ಎರಡನೇ ಅಲೆ ಬಂದ ಮೇಲೆ ಕೋವಿಡ್ ಮೀಟಿಂಗ್ ಮಾಡಿಲ್ಲ. ಜೀವ ಉಳಿಸಲು ಆಗದ ಮೇಲೆ ಕುರ್ಚಿ ಬಿಟ್ಟು ಹೋಗಬೇಕು. ಇವರು ಬೆಂಗಳೂರಿನಲ್ಲಿ ಕುಳಿತು ಮಜಾ ಮಾಡೊಕಾ ಇರೊದು.