ನಕಲಿ ನಂದಿನಿ ತುಪ್ಪ ಪ್ರಕರಣ- ಮತ್ತೇ ಮೂವರ ಬಂಧನ!

1 min read

MYSURU :- ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿದ್ದ ನಂದಿನಿ ನಕಲಿ ತುಪ್ಪ ಪತ್ತೆ ಪ್ರಕರಣ ಸಂಬಂಧ ಮತ್ತೇ ಮೂವರನ್ನ ಬಂಧಿಸಿರುವ ಬಗ್ಗೆ ಮೈಸೂರು ಜಿಲ್ಲಾ ಎಸ್‌ಪಿ ಚೇತನ್ ಅವರು ಮಾಹಿತಿ ನೀಡಿದ್ದು ಇದು ಸೇರಿ ಈ ವರೆಗು ಪ್ರಕರಣದಲ್ಲಿ 7 ಜನರ ಬಂಧನವಾಗಿದೆ. ಮೈಸೂರಿನ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನೂ ಪ್ರಮುಖವಾದ ಇಬ್ಬರ ಆರೋಪಿಗಳು ಬಂಧಿಸಬೇಕಿದ್ದು, ಸದ್ಯಕ್ಕೆ ಕರ್ನಾಟಕದ ಬೇರೆ ಬೇರೆ ಭಾಗದ ಅಂಗಡಿಗಳಿಗೆ ನಕಲಿ ತುಪ್ಪ ಕಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿ ನಕಲಿ ತುಪ್ಪ ಸರಬರಾಜದ ಬಗ್ಗೆ ಮಾಹಿತಿ ಇಲ್ಲ.

https://youtu.be/BpphtFuRFik ವಿಡಿಯೋ ನೋಡಿ

ಪ್ರಮುಖ ಆರೋಪಿಗಳ ಬಂಧನದ ನಂತರ ಎಲ್ಲಾ ಮಾಹಿತಿ ಸಿಗುತ್ತದೆ ಎಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಚೇತನ್ ಅವರು ತಿಳಿಸಿದ್ದಾರೆ.

ದನಗಳ ಕಳ್ಳತನ ಮಾಡಿದ್ದ 10 ಪ್ರಕರಣ ಬೇಧಿಸಿದ ಮೈಸೂರು ಜಿಲ್ಲಾ ಪೊಲೀಸ್’

ಇನ್ನು ಇದೇವೇಳೆ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ದನಗಳ ಕಳ್ಳತನ ಮಾಡಿದ್ದ 10 ಪ್ರಕರಣ ಬೇಧಿಸಿರುವುದಾಗಿ ಮಾಹಿತಿ ನೀಡಿದ ಚೇತನ್ ಅವರು, ಸುಮಾರು 14 ಹಸುಗಳು ಹಾಗೂ ಟೆಂಪೋ ವಶಕ್ಕೆ ಪಡೆದಿದ್ದು ಒಟ್ಟು ಆರು ಆರೋಪಿಗಳಿಂದ ಕೃತ್ಯ ನಡೆದೆ. ಇದರಲ್ಲಿ ಆರು ಜನರ ಬಂಧನವಾಗಿದ್ದು, ಐದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಪ್ರಕರಣ, ಐದು ನಂಜನಗೂಡು ಗ್ರಾಮಾಂತರದಲ್ಲಿ ನಡೆದಿದ್ದ ಪ್ರಕರಣ ಎಂದು ಮಾಹಿತಿ ನೀಡಿದ್ದಾರೆ.

About Author

Leave a Reply

Your email address will not be published. Required fields are marked *