‘ಡ್ರೈವರ್ ಜಮುನಾ’ ಸಿನಿಮಾದ ಟ್ರೇಲರ್ ರಿಲೀಸ್

1 min read

ಸಿನಿಮಾ: ವಿಶಿಷ್ಟ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಮನೆ ಮಾತಾಗಿರುವ ನಟಿ ಐಶ್ವರ್ಯಾ ರಾಜೇಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ಡ್ರೈವರ್ ಜಮುನಾ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಹೆಣ್ಣು ಡ್ರೈವರ್ ವೃತ್ತಿಗೆ ಇಳಿದಾಗ ಆಕೆ ಎದುರಿಸುವ ಸವಾಲುಗಳನ್ನು ಇಡೀ ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ. ಕನ್ನಡದಲ್ಲಿ ಈ ಟ್ರೇಲರ್ ನ್ನು ಬಹುಭಾಷಾ ನಟ ಕಿಶೋರ್ ಬಿಡುಗಡೆ ಮಾಡಿದರು.

‘ವತ್ತಿಕುಚ್ಚಿ’ ಸಿನಿಮಾ ಖ್ಯಾತಿಯ ಪಾ. ಕನ್ಸ್ಲಿನ್ ನಿರ್ದೇಶನಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಐಶ್ವರ್ಯಾ ರಾಜೇಶ್ ಕ್ಯಾಬ್ ಡ್ರೈವರ್ ಆಗಿ ಬಣ್ಣ ಹಚ್ಚಿದ್ದಾರೆ. ತಾರಾಬಳಗದಲ್ಲಿ ಆಡುಕಳಂ ನರೇನ್, ಶ್ರೀ ರಂಜನಿ, ‘ಸ್ಟ್ಯಾಂಡ್ ಅಪ್ ಕಾಮಿಡಿಯನ್’ ಅಭಿಷೇಕ್, ‘ರಾಜಾ ರಾಣಿ’ ಸಿನಿಮಾ ಖ್ಯಾತಿಯ ಪಾಂಡಿಯನ್, ಕವಿತಾ ಭಾರತಿ, ಮಣಿಕಂದನ್, ರಾಜೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಗೋಕುಲ್ ಬೆನೊಯ್ ಛಾಯಾಗ್ರಹಣ, ಗಿಬ್ರಾನ್ ಸಂಗೀತ ಜವಾಬ್ದಾರಿ ಹೊತ್ತುಕೊಂಡಿದ್ದು, ಎಸ್.ಪಿ.ಚೌದರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಡ್ರೈವರ್ ಜಮುನಾ ಸಿನಿಮಾ ಮಹಿಳಾ ಕ್ಯಾಬ್ ಡ್ರೈವರ್ ಸುತ್ತ ನಡೆಯುವ ಘಟನೆಯಾಗಿದ್ದು, ಈ ಪಾತ್ರಕ್ಕಾಗಿ ಐಶ್ವರ್ಯಾ ಮಹಿಳಾ ಕ್ಯಾಬ್ ಡ್ರೈವರ್ ಭೇಟಿ ಮಾಡಿ ಅವರ ಹವಾ-ಭಾವವನ್ನು ತಮ್ಮ ಪಾತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಯಾವುದೇ ಡೂಪ್ ಬಳಸದೇ ಐಶ್ವರ್ಯಾ ತಮ್ಮ ಪಾತ್ರ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬಂದಿದೆ.

About Author

Leave a Reply

Your email address will not be published. Required fields are marked *