ಮೈಸೂರಿನಲ್ಲಿ ಡಾ. ರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ
1 min readಮೈಸೂರು: ಡಾ. ರಾಜ್ ಕುಮಾರ್ ರವರ ಹುಟ್ಟು ಹಬ್ಬದ ದಿನಾಚರಣೆಯನ್ನು ಇಂದು ದಿನಾಂಕ:24-04-2021 ರ ಬೆಳಿಗ್ಗೆ 10.00 ಕ್ಕೆ ಅರಮನೆ ಮುಂಬಾಗದಲ್ಲಿರುವ ಡಾ| ರಾಜಕುಮಾರ್ ಉದ್ಯಾನವನದಲ್ಲಿ ರಾಜ್ ಕುಮಾರ್ ರವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರರವರು, ಮಾಜಿ ಮಹಾಪೌರರು ಹಾಗೂ ಭಾ.ಜ.ಪ ಮುಖಂಡರಾದ ಶ್ರೀ ಸಂದೇಶ್ ಸ್ವಾಮಿ, ವಾರ್ತಾ & ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಾಜು, ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಶ್ರೀಮತಿ ಲಕ್ಷ್ಮೀದೇವಿ, ಚಾಮರಾಜ ಭಾ.ಜ.ಪ ಉಪಾಧ್ಯಕ್ಷರಾದ ಶ್ರೀ ಕುಮಾರಗೌಡ, ಮೈಸೂರು ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿರಾಜಕೀಯ, ವಿಕ್ರಂಅಯ್ಯಂಗಾರ್,ನವೀನ್, ಸುಚೀಂದ್ರ ಮುಂತಾದವರು ಹಾಜರಿದ್ದರು.