ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಬಗಾದಿ ಗೌತಮ್ ಅಧಿಕಾರ ಸ್ವೀಕಾರ
1 min readಮೈಸೂರು: ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಬಗಾದಿ ಗೌತಮ್ ಅವರು ಇಂದು ಅಧಿಕಾರ ಸ್ವೀಕಾರಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿಯಿಂದ ಅಧಿಕಾರ ಹಸ್ತಾಂತರ ಕಾರ್ಯ ನಡೆದಿದೆ. ಈ ವೇಳೆ ಜಿ.ಪಂ ಸಿಇಓ ಉಪಸ್ಥಿತರಿದ್ದರು.
ಇನ್ನು ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗೈರಾಗಿದ್ದು, ವಾಟ್ಸಾಪ್ ಮೂಲಕ ಮೈಸೂರು ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ಅಧಿಕಾರ ಸ್ವೀಕಾರ ಬಳಿಕ ಮಾತನಾಡಿದ ಡಿಸಿ ಬಗಾದಿ ಗೌತಮ್ ನಾನು ಲೋ ಫ್ರೋಫೈಲ್ ಅಧಿಕಾರಿ. ನನ್ನ 13 ವರ್ಷದ ಸರ್ವಿಸ್ನಲ್ಲಿ ಬಹುತೇಕರು ನನ್ನ ಹೆಸರು ಸಹ ಕೇಳಿಲ್ಲ. ನಾನು ಕೆಲಸ ಮಾಡಲು ಬಂದಿದ್ದೇನೆ. ವಿವಾದಿತ ಸ್ಥಳಕ್ಕೆ ಬಂದೆ ಅಂತ ಅನ್ನಿಸಿಲ್ಲ. ಒಳ್ಳೆಯ ಕೆಲಸ ಮಾಡಿದ್ರೆ ಎಲ್ಲರು ಒಳ್ಳೆಯವರಾಗುತ್ತಾರೆ. ನಾನು ಮೈಸೂರಿನ ಜನಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರ ಸಲಹೆಗಳನ್ನ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಈ ವರ್ಗಾವಣೆ ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೂ ಆಗಿದೆ ಇದನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಕೆಲಸ ಮಾಡ್ತಿನಿ. ಕೋವಿಡ್ ಟೈಂ ಅಲ್ಲಿ ಎಲ್ಲ ಜಿಲ್ಲಾಧಿಕಾರಿ ಕೆಲಸವು ಚಾಲೆಂಜಿಂಗ್ ಆಗಿಯೇ ಇರುತ್ತೆ. ಒಳ್ಳೆ ಕೆಲಸ ಮಾಡಿದ್ರೆ ಎಲ್ಲರು ಮುಂದೆ ಬಂದು ಸಹಕಾರ ಕೊಡ್ತಾರೆ ಎಂದಿದ್ದಾರೆ.
ಪತ್ನಿ ಮಂಡ್ಯದಲ್ಲಿ ಡಿಸಿಯಾಗಿರುವ ವಿಚಾರ: ಪತ್ನಿ ಮನೆ ಮೊದಲೂ ಸಹ ಹತ್ತರವೇ ಇತ್ತು. ಬೆಂಗಳೂರಿನಿಂದ ಮಂಡ್ಯ ದೂರವೇನಲ್ಲ. ಈಗ ಇನ್ನಷ್ಟು ಹತ್ತಿರಕ್ಕೆ ಬಂದಿದ್ದೇವೆ. ನಗುತ್ತಲೆ ಮೈಸೂರಿಗೆ ಬಂದಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ ಡಿಸಿ ಬಗಾದಿ ಗೌತಮ್.