ನೀವು ಜನರನ್ನು ಕೊಂದಿದ್ದೀರಿ: ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ
1 min readಚಾಮರಾಜನಗರ: ನಮಗೆ ಮಂತ್ರಿಗಳು ಸುಳ್ಳು ಹೇಳ್ತಿದ್ದಾರೊ, ಮಾಧ್ಯಮದವರು ಹೇಳ್ತಿದ್ದಾರೊ ಅನ್ನು ಅನುಮಾನ ಇತ್ತು. ಇಲ್ಲಿಗೆ ಬಂದ ಮೇಲೆ 28 ಜನ ಸತ್ತಿರೋದು ಗೊತ್ತಾಗಿದೆ ಎಂದು ಚಾಮರಾಜನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯ ಮಟ್ಟದಲ್ಲೂ ನಮ್ಮ ಪ್ರತಿನಿಧಿಗಳು ಪೋನ್ ಮಾಡಿ ಮಾತನಾಡಿದ್ದಾರೆ. ಒಂದೇ ಟೈಂ ನಲ್ಲಿ 24 ಜನ ಸತ್ತಿದ್ದಾರೆ. ಆಕ್ಸಿಜನ್ ತೊಂದರೆಯಿಂದ ಸತ್ತಿದ್ದಾರೆ. ನೀವು ಜನರನ್ನು ಕೊಂದಿದ್ದೀರಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ಆಗಬೇಕು. ಯಾರಿಗೆ ಏನು ಶಿಕ್ಷೆ ಆಗಬೇಕು ಆಗಲೇಬೇಕು. ಸತ್ತ ಕುಟುಂಬಗಳಿಗೆ 25 ಲಕ್ಷ ಪರಿಹಾರ ಕೊಡಬೇಕು ಎಂದು ಡಿಕೆಶಿ ಆಗ್ರಹಿಸಿದರು.