ಕೋವಿಡ್ ಸೋಂಕಿಗೆ ಹೆದರಿದ ಜನ: ಏಣಿಯಲ್ಲಿಟ್ಟು ಬೈಕ್’ನಲ್ಲಿ ಮೃತದೇಹ ಸಾಗಿಸಿದ ಯುವಕರು
1 min readಚಾಮರಾಜನಗರ: ವ್ಯಕ್ತಿಯೊಬ್ಬ ಜ್ವರದಿಂದ ಮೃತಪಟ್ಟಿದ್ದರೂ ಆತನನ್ನು ಮುಟ್ಟಲು ಗ್ರಾಮಸ್ಥರು ಭಯಪಟ್ಟು ಎರಡುದಿನ ಹಾಗೇ ಇದ್ದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರುಪುರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ಏಕಾಂಗಿ ಯಾಗಿದ್ದ ಮಹಾದೇವ (60) ತರಕಾರಿ ವ್ಯಾಪಾರಿಯಾಗಿದ್ದರು. ಅವರು ಮೂರು ದಿನ ಜ್ವರದಿಂದ ಬಳಲುತ್ತಿದ್ದರು. ಅವರು ಕೊವಿಡ್ ಟೆಸ್ಟ್ ಮಾಡಿಸಿಕೊಂಡಿರಲಿಲ್ಲ. ಆದರೆ ಅವರಿಗೆ ಸೋಂಕು ತಗುಲಿದೆ ಎಂದೇ ಗ್ರಾಮಸ್ಥರು ಭಾವಿಸಿದ್ದರು.
ಅವರ ಮನೆಯ ಬಾಗಿಲು ತೆರೆಯುವ ಪ್ರಯತ್ನವನ್ನೂ ಮಾಡಿರಲಿಲ್ಲ. ಸ್ಥಳೀಯ ಕೆಲವು ಯುವಕರು ಭಾನುವಾರ ಪಿಎಫ್‌ಐ ಸಂಘಟನೆಗೆ ಫೋನ್ ಮಾಡಿದಾಗ ಸಂಘಟನೆಯ ಜಿಲ್ಲಾ ಮುಖಂಡ ಕಫಿಲ್ ಮತ್ತು ತಾಲೂಕು ಮುಖಂಡ ಮತೀನ್ ಸ್ಥಳಕ್ಕೆ ಬಂದು ನೋಡಿ ಮೃತ ದೇಹ ಸಾಗಿಸಲು ಮುಂದಾದರು.