ಮೈಸೂರಿನಲ್ಲಿ ಈಗಿರುವಂತೆಯೇ ಲಾಕ್‌ಡೌನ್ ಮುಂದುವರೆಯಲಿದೆ: ಡಿಸಿ ಡಾ.ಬಗಾದಿ ಗೌತಮ್
1 min readಮೈಸೂರು: ಮೈಸೂರಿನಲ್ಲಿ ಈಗಿರುವಂತೆಯೇ ಲಾಕ್‌ಡೌನ್ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿಗಳು ಸದ್ಯ ಇದೀಗಾ ಮೈಸೂರಿನಲ್ಲಿ ಬೆಳಗ್ಗೆ 6 ರಿಂದ ಬೆಳಗ್ಗೆ 10ರ ವರೆಗು ಅಗತ್ಯ ಸೇವೆಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಅದರಂತೆ ಇದೇ ಆದೇಶ ಮುಂದಿನ ಒಂದು ವಾರ ಅಂದರೆ ದಿನಾಂಕ 21/06/2021ರ ಬೆಳಗ್ಗೆ 6 ಗಂಟೆ ವರೆಗು ಮುಂದುವರೆಯಲಿದೆ ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದ್ದಾರೆ. ಅಲ್ಲದೆ ಸರ್ಕಾರ ಈಗಾಗಲೇ ಕೆಲವು ಜಿಲ್ಲೆಗಳಿಗೆ ಅನ್‌ಲಾಕ್ ಮಾಡಿ ಆದೇಶ ಹೊರಡಿಸಿದೆ. ಆದರೆ ಮೈಸೂರು ಸೇರಿ ಕೆಲ ಜಿಲ್ಲೆಗಳನ್ನ ಲಾಕ್‌ಡೌನ್ ಮುಂದುವರೆಸುವ ಆದೇಶ ಮಾಡಲಾಗಿತ್ತು. ರಾಜ್ಯ ಸರ್ಕಾರದ ಆದೇಶದ ಜೊತೆಗೆ ಜಿಲ್ಲಾಧಿಕಾರಿಗಳ ವಿಶೇಷ ಅಧಿಕಾರ ಬಳಸಿ- ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.