ಟಿವಿಯಲ್ಲಿ ಬರ್ತಿದೆ ಡಾಲಿ ಧನಂಜಯ್ ‘ಗುರುದೇವ್ ಹೋಯ್ಸಳ’: ಯಾವಾಗ, ಎಲ್ಲಿ?
1 min readಸಿನಿಮಾ: ಸ್ಯಾಂಡಲ್‍ವುಡ್ ಡಾಲಿ ಎಂದೆ ಖ್ಯಾತಿಗಳಿಸಿರುವ ಧನಂಜಯ್ ನಟನೆಯ ‘ಗುರುದೇವ್ ಹೊಯ್ಸಳ’ ಸಿನಿಮಾ ಟಿವಿಯಲ್ಲಿ ಬರಲು ಸಜ್ಜಾಗಿದೆ. ಡಾಲಿ ವೃತ್ತಿ ಬದುಕಿನ ಅತೀ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಇದಾಗಿದ್ದು ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು. ಚಿತ್ರಮಂದಿರಗಳಲ್ಲಿ ರಾರಾಜಿಸಿದ್ದ ಈ ಸಿನಿಮಾ ಇದೀಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ‘ಗುರುದೇವ್ ಹೊಯ್ಸಳ’ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇದೇ 13 ಭಾನವಾರದಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಸ್ಟಾರ್ ವಾಹಿನಿ ಪ್ರೋಮೋ ಕೂಡ ರಿಲೀಸ್ ಮಾಡಿದೆ. ಚಿತ್ರಮಂದಿರಗಳಲ್ಲಿ ಹಾಗೂ ಒಟಿಟಿಯಲ್ಲಿ ನೋಡಲು ಮಿಸ್ ಮಾಡಿಕೊಂಡವರು ಇದೇ ಭಾನುವಾರ ಸಂಜೆ ಟಿವಿಯಲ್ಲಿ ಗುರುದೇವ್ ಹೊಯ್ಸಳನನ್ನು ನೋಡಿ ಎಂಜಾಯ್ ಮಾಡಬಹುದು.
ಹೊಯ್ಸಳ ಚಿತ್ರಕ್ಕೆ ವಿಜಯ್ ನಾಗೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಧನಂಜಯ್ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಫಸ್ಟ್ ಲುಕ್ ಮತ್ತು ಪೋಸ್ಟರ್‌ಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದ ಹೊಯ್ಸಳ ಮಾರ್ಚ್ 30ರಂದು ತೆರೆಗೆ ಬಂದಿತ್ತು. ಅದ್ದೂರಿಯಾಗಿ ರಿಲೀಸ್ ಆಗಿದ್ದ ಹೊಯ್ಸಳನನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಪ್ರೇಕ್ಷಕರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಈ ಸಿನಿಮಾದಲ್ಲಿ ಧನಂಜಯ್‌ಗೆ ನಾಯಕಿಯಾಗಿ ಅಮೃತಾ ಐಯ್ಯಂಗರ್ ನಟಿಸಿದ್ದಾರೆ. ಅಂದಹಗೆ ಇಬ್ಬರೂ ಒಟ್ಟಿಗೆ ನಟಿಸಿದ್ದ 3ನೇ ಸಿನಿಮಾ ಇದಾಗಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತು ‘ಬಡವ ರಾಸ್ಕಲ್’ ಸಿನಿಮಾದಲ್ಲಿ ನಟಿಸಿದ್ದ ಈ ಜೋಡಿ ಹೊಯ್ಸಳ ಮೂಲಕ ಮತ್ತೆ ಒಟ್ಟಿಗೆ ನಟಿಸಿದ್ದು ಅಭಿಮಾನಿಗಳ ಹೃದಯ ಗೆದ್ದಿದ್ದರು.
ಈ ಸಿನಿಮಾದಲ್ಲಿ ಧನಂಜಯ್ ಮತ್ತು ಅಮೃತಾ ಜೊತೆಗೆ ನಾಗಭೂಷಣ್, ನವೀನ್ ಶಂಕರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಕೆಆರ್ ಜಿ ನಿರ್ಮಾಣದಲ್ಲಿ ಮೂಡಿಬಂದಿತ್ತ. ಸೂಪರ್ ಹಿಟ್ ಹೊಯ್ಸಳ ಸಿನಿಮಾ ಇದೀಗ ಇದೇ ಭಾನುವಾರ ಟಿವಿಯಲ್ಲಿ ಬರ್ತಿದ್ದು ಪ್ರೇಕ್ಷಕರು ಮನೆಯಲ್ಲೇ ಕುಟುಂಬದ ಜೊತೆ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಬಹುದು.