ಚರ್ಚ್’ನಲ್ಲಿ ಕೋವೀಡ್ ನಿಯಮ ಉಲ್ಲಂಘನೆ: ಕೋವೀಡ್’ನಿಂದ ಸಾವನ್ನಪ್ಪಿದ ಪಾಧ್ರಿಯ ಮೃತದೇಹವನ್ನಿಟ್ಟು ಪ್ರಾರ್ಥನೆ
1 min readಮೈಸೂರು: ಕೋವೀಡ್’ನಿಂದ ಸಾವನ್ನಪ್ಪಿದ ಪಾಧ್ರಿಯ ಮೃತದೇಹವನ್ನಿಟ್ಟು ಪ್ರಾರ್ಥನೆ ಸಲ್ಲಿಸಿ ಕೋವೀಡ್ ನಿಯಮ ಉಲ್ಲಂಘನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಗಾಂಧಿನಗರದಲ್ಲಿರುವ ಕರುಣಾಪುರ ಚರ್ಚ್ ಕೋವೀಡ್ ನಿಯಮ ಉಲ್ಲಂಘನೆಯಾಗಿದ್ದು ಮಿಶನ್ ಆಸ್ಪತ್ರೆಯಲ್ಲಿ ಇಂದು ಕೋವೀಡ್ ನಿಂದ ಮೃತರಾದ ಪಾದ್ರಿ ಮೃತದೇಹವನ್ನು ಚರ್ಚ್ ಗೆ ತಂದು ಇಪ್ಪತ್ತು ನಿಮಿಷಗಳ ಚರ್ಚ್ ನ ಭಕ್ತರು ಪಾರ್ಥನೆ ಸಲ್ಲಿಸಿದ್ದಾರೆ. ಕೋವೀಡ್ ನಿಂದ ಮೃತರಾದರೆ ಸರ್ಕಾರದ ನಿಯಮ ಪಾಲಿಸಬೇಕು.
ಪ್ರಾರ್ಥನೆ ಸಲ್ಲಿಸಿರುವುದಕ್ಕೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಿಯರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮೃತದೇಹವನ್ನ ಅಂಬೂಲೆನ್ಸ್ ಹೊತ್ತು ಹೋಗಿದೆ. ಇನ್ನು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋವನ್ನ ಸ್ಥಳಿಯರು ವೈರಲ್ ಮಾಡಿದ್ದಾರೆ.