ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಶೀಘ್ರವೇ ಮಾರುಕಟ್ಟೆಗೆ

1 min read

ನವದೆಹಲಿ,ಜ.20-ಶೀಘ್ರವೇ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಕೊವಿಶೀಲ್ಡ್‌, ಕೋವ್ಯಾಕ್ಸಿನ್‌ ಲಸಿಕೆ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಕೇಂದ್ರ ಔಷಧ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ (CDSCO) ಯವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಲಸಿಕೆ ಮಾರುಕಟ್ಟೆಗೆ ಬರುವ ಮೊದಲು DCGI ಮೌಲ್ಯಮಾಪನ ಮಾಡಲಿದೆ. ಬಳಿಕ ನಿರ್ಧಾರ ಪ್ರಕಟವಾಗಲಿದೆ. ಲಸಿಕೆ ಮಾರುಕಟ್ಟೆ ಬಳಕೆಗೆ ಅನುಮತಿ ದೊರಕಿದರೂ ಜನ ಸಾಮಾನ್ಯರ ಕೈ ಸೇರಲು ಕೆಲ ಸಮಯಾವಕಾಶ ಬೇಕಾಗುತ್ತದೆ. ಈ ಲಸಿಕೆಗಳನ್ನು ಸಂಗ್ರಹಿಸಲು 2-8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಅಗತ್ಯವಿದೆ.
ಈ ಬಗ್ಗೆ ಸೀರಂ ಇನ್‌ ಸ್ಟಿಟ್ಯೂಟ್‌ ಹಾಗೂ ಭಾರತ್‌ ಬಯೋಟೆಕ್‌ ತಮ್ಮ ಲಸಿಕೆಗಳನ್ನು ಮಾರುಕಟ್ಟೆಗೆ ಒದಗಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಬಗ್ಗೆ CDSCO ಎರಡೂ ಲಸಿಕಾ ಕಂಪನಿಗಳ ದಾಖಲೆಗಳನ್ನು ಪರಿಶೀಲಿಸಿ, ಈ ವಿಷಯವನ್ನು DCGIಗೆ ಶಿಫಾರಸು ಮಾಡಿದೆ.
ದೇಶದಲ್ಲಿ 2021ರ ಜನವರಿಯಲ್ಲಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳಿಗೆ ಅನುಮತಿ ನೀಡಲಾಗಿತ್ತು.

About Author

Leave a Reply

Your email address will not be published. Required fields are marked *