ಮೈಸೂರಿನಲ್ಲಿ ಕೊರೊನಾ ಲಸಿಕೆ ಇಲ್ಲ: ಲಸಿಕ ಕೇಂದ್ರಗಳಿಗೆ ಸಾರ್ವಜನಿಕರು ಬರಬೇಡಿ
1 min readಮೈಸೂರು: ಮೈಸೂರಿನಲ್ಲಿ ಕೊರೊನಾ ಲಸಿಕೆ ಇಲ್ಲ. ಲಸಿಕ ಕೇಂದ್ರಗಳಿಗೆ ಸಾರ್ವಜನಿಕರು ಬರಬೇಡಿ ಅಂತ ಮೈಸೂರು ಜಿಲ್ಲಾ ಆರೋಗ್ಯಧಿಕಾರಿ ಡಾ.ಪ್ರಸಾದ್ ಹೇಳಿದ್ದಾರೆ.
ಸದ್ಯ ಮೈಸೂರಿನಲ್ಲಿ ವ್ಯಾಕ್ಸಿನ್ ಕೊರತೆ ಇದೆ. ಈ ಕಾರಣಕ್ಕೆ ಮೂರು ದಿನ ಲಸಿಕೆ ಅಭಿಯಾನ ಸ್ಥಗಿತ ಮಾಡಿದ್ದೇವೆ. ಜುಲೈ1 ರ ನಂತರ ಅಭಿಯಾನ ಮತ್ತೆ ಪ್ರಾರಂಭವಾಗುತ್ತದೆ. ಅಲ್ಲಿಯವರೆಗು ಸಾರ್ವಜನಿಕರು ಸಹಕಾರ ಕೊಡಿ. ಸದ್ಯ 12 ಲಕ್ಷಕ್ಕು ಹೆಚ್ಚು ಡೋಸ್ ಗಳನ್ನ ಕೊಟ್ಟಿದ್ದೇವೆ. 45 ವರ್ಷದ ಮೇಲ್ಪಟ್ಟವರಿಗೆ ಶೇ 80 ರಷ್ಟು ಮೊದಲ ಡೋಸ್ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಶೇ 20 ರಷ್ಟು ಲಸಿಕೆ ಕೊಟ್ಟಿದ್ದೇವೆ. ಸದ್ಯ ಜಿಲ್ಲೆಯಲ್ಲಿ ಲಸಿಕೆ ಕೊರತೆ ಇದೆ. ಆದರೆ ಎರಡನೇ ಡೋಸ್ ಪಡೆಯಬೇಕಾದವರು ನಿಗದಿತ ದಿನಾಂಕದಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪಡೆಯಬಹುದು ಅಂತ ಜಿಲ್ಲಾ ಆರೋಗ್ಯಧಿಕಾರಿ ಡಾ.ಪ್ರಸಾದ್ ತಿಳಿಸಿದ್ದಾರೆ.