ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಭಾರತ್‌ನಗರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು: ಶಾಸಕ ಜಿ.ಟಿ.ದೇವೇಗೌಡ
1 min readಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಭಾರತ್‌ನಗರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಜಿ.ಟಿ.ದೇವೇಗೌಡರ ತಿಳಿಸಿದರು.
ಭಾರತ್‌ನಗರವನ್ನು ಕೊಳಚೆ ನಿರ್ಮೂಲನ ಮಂಡಳಿವತಿಯಿಂದ ಭಾರತ್‌ನಗರದಲ್ಲಿ ಈಗಾಗಲೇ ಸಿ.ಸಿ.ರಸ್ತೆ ಮತ್ತು ಸಿ.ಸಿ.ಚರಂಡಿ ನಿರ್ಮಾಣ ಮಾಡಿದ್ದು, ಬಾಕಿ ಇರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಭಾರತ್‌ನಗರದಲ್ಲಿ ಇನ್ನು ಹಲವಾರು ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಇವರುಗಳಿಗೆ ಮಂಡಕಳ್ಳಿಯಲ್ಲಿ ಆಶ್ರಯ ಯೋಜನಯಲ್ಲಿ ಮನೆಗಳನ್ನು ನೀಡುವುದಾಗಿ ತಿಳಿಸಿದರು. ಭಾರತ್‌ನಗರದಲ್ಲಿ ರಸ್ತೆ ಅಭಿವೃದ್ಧಿ, ಹೈಮಾಸ್ಡ್ ದೀಪ, ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಅಮೃತ ಬಡಾವಣೆಗೆ ಸಂಬಂಧಿಸಿದಂತೆ ಜನರಿಂದ ಸಮಸ್ಯೆ ಆಲಿಸಿದ ಶಾಸಕರು, ಅಮೃತ ಬಡಾವಣೆಯ ನಿವಾಸಿಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಂಜು, ಮಂಜುಗೌಡ, ಮಾಜಿ ತಾ.ಪಂ. ಸದಸ್ಯರಾದ ತಮ್ಮೇಗೌಡ, ಹಂಚ್ಯಾ ರಾಮಚಂದ್ರ, ಸಾತಗಳ್ಳಿ ಜಯಣ್ಣ, ಚನ್ನಪ್ಪ, ಯರಗನಹಳ್ಳಿ ಮಹೇಶ್, ರಾಜೇಶ್, ರಮ್ಮನಹಳ್ಳಿ ಶ್ರೀಕಾಂತ ಅರಸ್, ಮಂಜು ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.