ಮೈಸೂರಲ್ಲು ಬ್ಲಾಕ್ ಫಂಗಸ್ ಆರ್ಭಟ: 8 ಮಂದಿ ಬಲಿ
1 min readಮೈಸೂರು: ಮೈಸೂರಲ್ಲು ಬ್ಲಾಕ್ ಫಂಗಸ್ ಆರ್ಭಟ ಹೆಚ್ಚಾಗಿದ್ದು ಬ್ಲಾಕ್ ಫಂಗಸ್ಗೆ ಮೈಸೂರಿನಲ್ಲಿ 8 ಮಂದಿ ಬಲಿಯಾಗಿದ್ದಾರೆ ಅಂತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.
ಈವರೆಗು ಮೈಸೂರಿನಲ್ಲಿ 66 ಪ್ರಕರಣ ಪತ್ತೆಯಾಗಿವೆ. 50 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 8 ಮಂದಿ ಬ್ಲಾಕ್ ಫಂಗಸ್ನಿಂದ ಚೇತರಿಕೆ ಕಂಡು ಡಿಸ್ಚಾರ್ಜ್ ಆಗಿದ್ದಾರೆ, 8 ಮಂದಿ ಸಾವಿಗೀಡಾಗಿದ್ದಾರೆ.
ಕೋವಿಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಳ್ತಿದೆ. ಮೂಗು ಕಟ್ಟಿಕೊಳ್ಳುವಿಕೆ, ಕಣ್ಣಿನ ಬಳಿ ನೋವು, ತಲೆ ನೋವು ಇದರ ಲಕ್ಷಣ. ಈ ಗುಣಲಕ್ಷಣ ಕಂಡು ಬಂದರೆ ಮೊದಲು ವೈದ್ಯರನ್ನ ಸಂಪರ್ಕಿಸಿ. ಕೊನೆ ಕ್ಷಣದಲ್ಲಿ ಈ ಲಕ್ಷಣ ಕಂಡು ಬಂದು ಆಸ್ಪತ್ರೆಗೆ ದಾಖಲಾದವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಆದಷ್ಟು ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಿ. ಈಗಾಗಲೇ ಬ್ಲಾಕ್ ಫಂಗಸ್ಗೆ ಬೇಕಾದ ಔಷಧಿ ಬಂದಿದೆ. ಸರ್ಕಾರ ಔಷಧಿಯನ್ನ ಜಿಲ್ಲಾಢಳಿತಕ್ಕೆ ತಲುಪಿಸಿದೆ. ಆದರೆ ಸಾರ್ವಜನಿಕರು ಈ ಬಗ್ಗೆ ಹೆಚ್ಚು ನಿಗಾ ವಹಿಸಿ. ಕೋವಿಡ್ನಂತೆ ಇದು ಸಹ ಆತಂಕಕಾರಿ ವಿಚಾರ ಎಂದು ಮೈಸೂರಿನಲ್ಲಿ ಡಿಸಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.