ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್- ಪಂಪಾ ನದಿಯಲ್ಲಿ ಸ್ನಾನಕ್ಕೆ ಅಸ್ತು- ಆದ್ರೆ ನಿಯಮ ಇದೆ!

1 min read

ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಗುಡ್ ನ್ಯೂಸ್!
ಕೇರಳ ಸರ್ಕಾರದಿಂದ ಅಯ್ಯಪ್ಪ ಭಕ್ತರಿಗೆ ಸಿಹಿ ಸುದ್ದಿ.
ಪಂಪಾ ನದಿಯಲ್ಲಿ ಸ್ನಾನ ಮಾಡೋಕೆ ಕೇರಳ ಸರ್ಕಾರ ಚಿಂತನೆ.
ಕಳೆದ ಎರಡು ವರ್ಷದಿಂದ ಪಂಪಾ ನದಿ ಸ್ನಾನ ನಿಷೇಧ ಮಾಡಿದ್ದ ಕೇರಳ ಸರ್ಕಾರ.
ಪಂಪಾ ಸ್ನಾನ ಹಾಗೂ ಇತರೆ ರಿಯಾಯಿತಿ ನೀಡಿದ ಸರ್ಕಾರ.

  • ಹೌದು ಅಯ್ಯಪ್ಪ ಸ್ವಾಮಿಯ ದರ್ಶನ ಪಡಿಬೇಕು ಅಂತ ಲಕ್ಷ ಲಕ್ಷ ಜನರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಇದಕ್ಕಾಗಿ ವ್ರತ ಕೈಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಇಡುಮುಡಿ ಕಟ್ಟಿ ತಲೆ ಮೇಲೆ ಹೊತ್ತು ಕಲ್ಲು ಮುಳ್ಳು ಎನ್ನದೆ ಯಾತ್ರೆ ಹೊರಡುವ ಅಯ್ಯಪ್ಪ ಭಕ್ತರು ಕಠಿಣ ವ್ರತ ಮಾಡಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿ ದೇಶದ ನಾನಾ ಭಾಗಗಳಿಂದ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಬರುತ್ತಾರೆ. ಇಂತಹ ಭಕ್ತರಿಗೆ ಕಳೆದ ಎರಡು ವರ್ಷದಿಂದಲು ಶಬರಿ ಮಲೆ‌ಯಲ್ಲಿ ಸರಿಯಾದ ಸ್ವಾಮಿಯ ದರ್ಶನ ಭಾಗ್ಯ ಇಲ್ಲದೆ ಬೇಸರ ವ್ಯಕ್ತಪಡಿಸಿದರು. ಆದರೆ ಈಗ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಯಾತ್ರೆಗೆ ಅವಕಾಶ ಸಿಕ್ಕಿದ್ದು ಭಕ್ತರು ಫುಲ್ ಖುಷ್ ಆಗಿದ್ದಾರೆ.

ಅಲ್ಲದೆ ಕಳೆದ ವರ್ಷ ಕೋವಿಡ್ ಕಾರಣ ಸ್ವಲ್ಪವೇ ಜನರಿಗೆ ಅವಕಾಶ ಕೊಟ್ಟು ನೀತಿ ನಿಯಮಗಳನ್ನು ಹೆಚ್ಚು ಮಾಡಲಾಗಿತ್ತು. ಅದರಂತೆ ಭಕ್ತರು ಕೂಡ ಶಬರಿಮಲೆಗೆ ಬಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ವಾಪಾಸಗ್ತಿದ್ರು. ಬೇಸರದ ಸಂಗತಿ ಅಂದ್ರೆ ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಪಂಪಾ ನಂದಿಯ ಸ್ನಾನಕ್ಕೆ ಮಾತ್ರ ಅವಕಾಶ ಇರಲಿಲ್ಲ. ಕಾರಣ ಕರೋನಾದಿಂದ ಸಾವಿರಾರು ಮಂದಿ ಸ್ನಾನ ಮಾಡಿ ಅದು ಇತರರಿಗು ಕೋವಿಡ್ ಹರಡುವ ಭೀತಿಯಿಂದ ಕೇರಳ ಸರ್ಕಾರ ಪಂಪಾ ನದಿಯ ಸ್ನಾನವನ್ನ ನಿಷೇಧ ಮಾಡಿತ್ತು. ಇದು ಭಕ್ತರಿಗೆ ಸಾಕಷ್ಟು ಬೇಸರವನ್ನುಂಟು ಮಾಡಿತ್ತು. ಯಾಕಂದ್ರೆ ಪಂಪಾ ನದಿ ಸ್ನಾನ ತುಂಗಾ ನದಿ ಪಾನ ಶ್ರೇಷ್ಠ ಎಂಬ ಪ್ರತೀತಿ ಇದೆ.

ಹಾಗಾಗಿಯೇ ಪಂಪಾ ನದಿಯ ಸ್ನಾನ ಇಲ್ಲದೆ ಭಕ್ತರು ಬೇಸರದಿಂದ ಶಬರಿಮಲೆ ಯಾತ್ರೆಯನ್ನ ಅಪೂರ್ಣವಾಗಿ ಮಾಡಿಕೊಂಡು ಬರುತ್ತಿದ್ದರು. ಇದೀಗಾ ಕೋವಿಡ್ ಪ್ರಕರಣ ಕಡಿಮೆ ಆಗುತ್ತಿದ್ದು ಕೊಂಚ ಕೊಂಚವೇ ಕೋವಿಡ್ ನಿಯಮಗಳನ್ನು ಕೇರಳ ಸರ್ಕಾರ ಸಡಿಲಗೊಳಿಸುತ್ತ ಬರುತ್ತಿದೆ. ಅದರಂತೆ ಕೊರೋನಾ ಸೋಂಕು ಕಡಿಮೆಯಾಗುತ್ತಿರುವ ಕಾರಣ ಶಬರಿಮಲೆ ಯಾತ್ರೆಗೆ ವಿಧಿಸಲಾಗಿದ್ದ ನಿರ್ಬಂಧನೆಗಳನ್ನು ಸಡಿಲಗೊಳಿಸಲು ಕೇರಳ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಕೇರಳ ಸಚಿವ ಕೆ. ರಾಧಾಕೃಷ್ಣನ್ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ.

ಪಂಪಾ ನದಿ ಸ್ನಾನದೊಂದಿಗೆ ಇತರೆ ಸರಳ ನಿಯಮ ಜಾರಿ

ಪಂಪಾದಿಂದ ನೀಲಿಮಲೆ, ಅಪಾಚೆ ಮೇಡು ಹಾಗೂ ಮರಕೂಟಂ ಮೂಲಕ ಭಕ್ತರು ಶಬರಿಮಲೆ ತಲುಪಲು ಅನುಮತಿ ನೀಡಲು ನಿರ್ಧರಿಸಿದೆ. ಮಾರ್ಗ ಮಧ್ಯದಲ್ಲಿ ಭಕ್ತರಿಗ ಉಳಿದುಕೊಳ್ಳುವ ವ್ಯವಸ್ಥೆ, ಪ್ರಾರ್ಥಮಿಕ ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಶಬರಿಮಲೆ ಯಾತ್ರೆಯ ವೇಳೆ ಪಂಪಾ ನದಿಯಲ್ಲಿ ಸ್ನಾನ ಹಾಗೂ ಬಲಿ ತರ್ಪಣ ನೀಡಲು ಅನುಮತಿ ನೀಡಲಾಗಿದೆ ಎಂದು ಕೇರಳ ಸರ್ಕಾರ ಮಾಹಿತಿ ನೀಡಿದೆ.

ಇದು ಅಯ್ಯಪ್ಪನ ಭಕ್ತರಿಗೆ ಎಲ್ಲಿಲ್ಲದ ಖುಷಿಯನ್ನ ಕೊಟ್ಟಿದ್ದು ಮಾಲಾಧಾರಿಗಳು ಇದೀಗಾ ಖುಷಿಯಿಂದ ಅಯ್ಯಪ್ಪನ ಯಾತ್ರೆ ಪೂರ್ಣಗೊಳಿಸುತ್ತಾರೆ. ಇದರಿಂದ ಪಂಪಾ ನದಿಯ ಸ್ನಾನ ಮಾಡಿ ಭಕ್ತರು ಕೂಡ ಪುನೀತಾರಾಗುತ್ತಾರೆ.

About Author

Leave a Reply

Your email address will not be published. Required fields are marked *