ಇಂದಿನಿಂದ ಚಾಮುಂಡಿ ಬೆಟ್ಟಕ್ಕಿಲ್ಲ ಭಕ್ತರ ಎಂಟ್ರಿ! ಹೀಗಿದೆ ನೋಡಿ ಆಷಾಡ ಮಾಸದ ರೂಲ್ಸ್!
1 min readಮೈಸೂರು: ಇಂದಿನಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಆಷಾಢ ಮಾಸದ ಅಮಾವಾಸ್ಯೆ ಹಿನ್ನಲೆಯಲ್ಲಿ ಹೆಚ್ಚು ಜನರು ಬೆಟ್ಟಕ್ಕೆ ಬರುವ ಕಾರಣ ಇಂದಿನಿಂದಲೇ ಭಕ್ತರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ. ಶುಕ್ರವಾರದ ಪ್ರತಿ ಆಷಾಢ ಮಾಸದಲ್ಲು ಲಕ್ಷಾಂತರ ಸಂಖ್ಯೆಯ ಭಕ್ತರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುತ್ತಾರೆ. ಈಗಾಗಿ ಭಕ್ತರ ಪ್ರವೇಶಕ್ಕೆ ಆಷಾಢ ಮಾಸದ ಶುಕ್ರವಾರಗಳು, ಶನಿವಾರ, ಭಾನುವಾರ ಹಾಗೂ ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ನಿಷೇಧ ಹೇರಲಾಗಿದೆ.
ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಹಾಗೂ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಲಾಯಗಳಿಗೆ ಈ ಆದೇಶ ಅನ್ವಯಿಸಲಿದೆ.
ಬೆಟ್ಟದ ನಿವಾಸಿಗಳು- ಸರ್ಕಾರಿ ಅಧಿಕಾರಿಗಳಿಗೆ ಗಣ್ಯರಿಗೆ ಎಂಟ್ರಿ.!
ಇನ್ನು ಗಣ್ಯರು ಸೇರಿದಂತೆ ಬೆಟ್ಟದ ನಿವಾಸಿಗಳಿಗೆ ಚಾಮುಂಡಿ ಬೆಟ್ಟಕ್ಕೆ ಎಂಟ್ರಿ ಇದೆ. ಆದರೆ ಬೆಟ್ಟದ ನಿವಾಸಿಗಳು ಅಗತ್ಯವಾಗಿದ್ದರೆ ಮಾತ್ರ ತಿರುಗಾಡಬೇಕಿದ್ದು ಐಡಿ ಕಾರ್ಡ್ ಜೊತೆಯಲ್ಲಿರಬೇಕು ಎಂದು ಸೂಚಿಸಲಾಗಿದೆ.