ಮಾರ್ಚ್ 11, 12ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ‘ಆನೆಗೊಂದಿ ಉತ್ಸವ’
1 min read
ಮಾರ್ಚ್ 11, 12ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ‘ಆನೆಗೊಂದಿ ಉತ್ಸವ’ ನಡೆಯಲಿದೆ ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಮಾಹಿತಿ ನೀಡಿದ್ದಾರೆ.
ಆನೆಗೊಂದಿ ಉತ್ಸವ ಈ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿದೆ.ಹಕ್ಕ ಬುಕ್ಕರ ಬೇಟೆನಾಯಿಯನ್ನು ಮೊಲವೊಂದು ಹಿಮ್ಮೆಟ್ಟಿಸುವ ವಿಚಿತ್ರ ಘಟನೆಗೆ ಸಾಕ್ಷಿಯಾದ ಸ್ಥಳ,ಶ್ರೀ ವಿದ್ಯಾರಣ್ಯರು ಹಕ್ಕ ಬುಕ್ಕ ರಿಗೆ ಧರ್ಮ ಬೋಧನೆ ಮಾಡಿ ವಿಜಯ ನಗರ ಸಾಮ್ರಾಜ್ಯವನ್ನು ಕಟ್ಟಲು ನಾಂದಿ ಹಾಡಿದ ಶ್ರೇಷ್ಠ ಭೂಮಿ, ಆನೆಗೊಂದಿ ವಿಜಯ ನಗರ ಅರಸರ ಮೊದಲ ರಾಜಧಾನಿಯಾಗಿತ್ತು, ಅಷ್ಟೇ ಅಲ್ಲದೆ ಆನೆಗೊಂದಿಯು ಪುರಾಣ ಪ್ರಸಿದ್ಧ ಸ್ಥಳವಾಗಿ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಸ್ಥಳ, ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಅಷ್ಟೇ ಅಲ್ಲದೆ ರಾಮಾಯಣದ ಕಾಲದಲ್ಲಿ ರಾಮ ಮತ್ತು ರಾಮನ ಭಂಟ ಹನುಮನು ಮೊದಲ ಭಾರಿ ಭೇಟಿಯಾದ ಸ್ಥಳ , ಇದೇ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಹುಟ್ಟಿರುವುದು , ಮಹಾ ಶ್ರೇಷ್ಠ ತಪಸ್ವಿ ವಿದ್ಯಾರಣ್ಯರ ತಪೋಭೂಮಿ , ವಾಲೀ ,ಸುಗ್ರೀವ, ಜಾಂಬವಂತನ ನೆಲೆವೀಡು, ,ಹೀಗೆ ಹತ್ತಾರು ಹಲವು ವೈಶಿಷ್ಟತೆಗೆ ಪಾತ್ರವಾಗಿದೆ.

ಉತ್ಸವಕ್ಕೆ ಸ್ಥಳೀಯ, ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ಬರುತ್ತಾರೆ. ಆನೆಗೊಂದಿ ವಿಜಯ ನಗರ ಅರಸರ ಮೊದಲ ರಾಜಧಾನಿಯಾಗಿತ್ತು. ಆನೆಗೊಂದಿ ಉತ್ಸವ ಈ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿದೆ. ಇಂತಹ ಅಧ್ಧೂರಿ ಉತ್ಸವದಲ್ಲಿ ಪಾಲ್ಗೊಳ್ಳಲು ತಮ್ಮೆಲ್ಲರಿಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಹ್ವಾನವನ್ನು ನೀಡಿದೆ.
ಕಾರ್ಯಕ್ರಮದ ಆಕರ್ಷಣೆ :- ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ , ರೋರಿಂಗ್ ಸ್ಟಾರ್ ಶ್ರೀ ಮುರುಳಿ ಆಗಮಿಸಲಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀಯುತ ಹಂಸಲೇಖ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಜರುಗಲಿದೆ, ಹಾಗೆ ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯಾ ಅವರಿಂದ ಸಂಗೀತ ರಸ ಸಂಜೆ ನಡೆಯಲಿದ್ದು ಅವರೊಟ್ಟಿಗೆ ಹೆಸರಾಂತ ಗಾಯಕರಾದ ಮಂಗ್ಲಿಅವರು ಭಾಗವಹಿಸಲಿದ್ದಾರೆ .
ಈಗ ತಾನೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೆಸರುವಾಸಿಯಾದ ತುಕಾಲಿ ಸಂತೋಷ್ ಅವರ ತಂಡದಿಂದ ಹಾಗೂ ಕಾಂತಾರ ತಂಡದಿಂದ ಹಾಸ್ಯ ಪ್ರದರ್ಶನ ನಡೆಯಲಿದ್ದು ಅದರ ಜೊತೆ ಸ ರಿ ಗ ಮ ಪ ಖ್ಯಾತಿಯ ಹನುಮಂತ ಹಾಗೂ ಸಂಗಡಿಗರಿಂದ ಸಂಗೀತ ಸಂಜೆ ನಡೆಯಲಿದೆ
ಕಾರ್ಯಕ್ರಮದ ನಿರೂಪಕರಾಗಿ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ನಡಿಸಿಕೊಡಲಿದ್ದು ಅತ್ಯಾಕರ್ಷಣೆಯ ಲೇಸರ್ ಶೋ ಹಾಗೂ ಸಿಡಿಮದ್ದು ಪ್ರದರ್ಶನಗಳು ಮುಖ್ಯ ಆಕರ್ಷಣೆಯಾಗಿದೆ