ಆಂಬುಲೆನ್ಸ್ ಸೇವೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತಷ್ಟು ಚುರುಕುಗೊಳಿಸಬೇಕು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
1 min readಮೈಸೂರು: ಆಂಬುಲೆನ್ಸ್ ಸೇವೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತಷ್ಟು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಆಂಬ್ಯುಲೆನ್ಸ್ ಸೇವೆಯ ಬಗ್ಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಆಂಬ್ಯುಲೆನ್ಸ್ ವಿಭಾಗಕ್ಕೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದರು.
ರೋಗಿಗಳು ಆಂಬ್ಯುಲೆನ್ಸ್ ಸೇವೆಯನ್ನು ಪಡೆಯಲು ಜಿಲ್ಲಾ ಕೋವಿಡ್ ವಾರ್ ರೂಂ ನ ಸಹಾಯವಾಣಿ 0821-2424111ಗೆ ಕರೆ ಮಾಡಿ, ಯಾವುದೇ ಸಮಯದಲ್ಲಾದರೂ ಸೇವೆ ಪಡೆಯಬಹುದು ಎಂದರು.
ಜಿಲ್ಲಾದ್ಯಂತ ಆದ್ಯತಾ ವಲಯದ 22 ಕ್ಯಾಟಗೆರಿಯಾ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನೇಷನ್ ಅನ್ನು ಶನಿವಾರದೊಳಗಾಗಿ ಮುಗಿಸಲೇಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವ್ಯಾಕ್ಸಿನೇಷನ್ ಪಡೆದುಕೊಳ್ಳಲು ಯಾರಿಗೂ ತೊಂದರೆ ಆಗಬಾರದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನೇಷನ್ ಅನ್ನು ನೀಡಲು ಗೈರು ಹಾಜರಾಗುವ ನಸ್೯ಗಳಿಗೆ ನೋಟಿಸ್ ನೀಡಿ ಎಂದರು.