ಅಂತರರಾಜ್ಯ ಓಡಾಟಕ್ಕೆ ಬ್ರೇಕ್- ಕೇರಳದಿಂದ ಮೈಸೂರಿಗಿಲ್ಲ ಸಂಚಾರ!!
1 min readಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು ಅಂತರರಾಜ್ಯ ಪ್ರಯಾಣಕ್ಕೆ ಅವಕಾಶವನ್ನ ನಿರ್ಭಂದಿಸಲಾಗಿದೆ. ಈಗಾಗಲೇ ಕೇರಳ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ಕೇವಲ ಕೃಷಿ ಸಂಬಂಧಿತ ರೈತರಿಗೆ ಮಾತ್ರ ರಾಜ್ಯಕ್ಕೆ ಎಂಟ್ರಿ ಇದ್ದು, ಅವರು ಕೂಡ 72 ಗಂಟೆಯೊಳಗೆ RTPCR ವರದಿ ಕಡ್ಡಾಯವಾಗಿದೆ.
RTPCR ನೆಗಿಟಿವ್ ವರದಿ ಇದ್ದರೆ ಮಾತ್ರ ರಾಜ್ಯದ ಗಡಿ ಭಾಗಕ್ಕೆ ಎಂಟ್ರಿ ನೀಡಲಾಗಿದೆ ಎಂದು ಮೈಸೂರಿನ HD ಕೋಟೆ ತಾಲೂಕಿನ THO ಡಾ.ರವಿ ಅವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೇರಳದ ವೈನಾಡು ಜಿಲ್ಲೆಯ ಡಿಸಿ ಅವರು ಕೃಷಿ ಸಂಬಂಧ ಕೆಲವರಿಗೆ ಪಾಸ್ ನೀಡಿದ್ದಾರೆ.
ಆ ಪಾಸ್ ಜೊತೆಗೆ RTPCR ನೆಗಿಟಿವ್ ವರದಿ ಇದ್ದರೆ ಮಾತ್ರ ರಾಜ್ಯದ ಗಡಿ ಭಾಗಕ್ಕೆ ಎಂಟ್ರಿಯಿದ್ದು, ಇಲ್ಲವಾದರೆ ಯಾವುದೇ ಕಾರಣಕ್ಕು ರಾಜ್ಯಕ್ಕೆ ಎಂಟ್ರಿ ಇಲ್ಲ ಎಂದು ರವಿ ಅವರು ತಿಳಿಸಿದ್ದಾರೆ. ಅಲ್ಲದೆ, ಮೆಡಿಕಲ್ ಎಮರ್ಜೆನ್ಸಿ ಇದ್ದರೆ ಅವರು ಕೂಡ ಪಾಸ್ ಹೊಂದುವುದು ಕಡ್ಡಾಯವಾಗಿದ್ದು ಅವರಿಗು ಸ್ಥಳದಲ್ಲೇ ಕರೋನಾ ತಪಾಸಣೆ ಮಾಡಿ, ಆದ್ಯತೆ ಮೇರೆಗೆ ಕಳುಹಿಸುತ್ತೇವೆ ಅಂತಾರೆ ಎಚ್.ಡಿ.ಕೋಟೆಯ ತಾಲೂಕು ಆರೋಗ್ಯಾಧಿಕಾರಿ ಡಾ.ರವಿ ಅವರು.