ಮಹಿಳೆಯರಿಗೆ ಫ್ರೀ ಬಸ್- ಮೈಸೂರಲ್ಲಿ ಪಾಲಿಕೆ ಸದಸ್ಯ ಗೋಪಿಯಿಂದ ಸಿಹಿ ಹಂಚಿ ಸಂಭ್ರಮ.!

1 min read

ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸೇವಾದಳ ವತಿಯಿಂದ ಮೈಸೂರಿನ ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪಾಲಿಕೆ ಸದಸ ಗೋಪಿ ನೇತೃತ್ವದಲ್ಲಿ ಸಿಹಿ ವಿತರಿಸಲಾಯಿತು. ರಾಜ್ಯ ಸರ್ಕಾರದ ಮಹತ್ವದ ಯೋಜನೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಇದಾಗಿದ್ದು ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ಚಾಲನೆ ಸಿಕ್ಕ‌ಬಳಿಕ ಮೈಸೂರಿನಲ್ಲಿ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಇತ್ತ ನಗರ ಬಸ್ ನಿಲ್ದಾಣದಲ್ಲಿ ಗೋಪಿ ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಮಧ್ಯಾಹ್ನ 1:00 ಗಂಟೆ ಯಲ್ಲಿ ಮೈಸೂರು ಹೃದಯ ಭಾಗದಲ್ಲಿರುವ ಸಿಟಿ ಬಸ್ ಸ್ಟ್ಯಾಂಡಿನಲ್ಲಿ
ಜೋಡೆತ್ತುಗಳಾದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯರವರು, ಮತ್ತು ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ರವರ
ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗಾಗಿ ಉಚಿತ ಈಗ ಖಚಿತ ಬಸ್ ಪ್ರಯಾಣ (ಶಕ್ತಿ) ಯೋಜನೆ ಸಿಟಿ ಬಸ್ ಸ್ಟ್ಯಾಂಡಿನಲ್ಲಿ ಉಚಿತ ಪ್ರಯಾಣ ಬೆಳೆಸುವ ಮಹಿಳೆಯರಿಗೆ ಮಹಾನಗರ ಪಾಲಿಕೆ ಸದಸ್ಯರಾದ* ಗೋಪಿ* ಮತ್ತು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸೇವಾದಳದ ಚೀಫ್ ಆರ್ಗನೈಸರ್ ಎಂ. ಕೆ. ಅಶೋಕ ರವರ ನೇತೃತ್ವದಲ್ಲಿ “ಗುಲಾಬಿ ಹೂ” ಮತ್ತು “ಮೈಸೂರ್ ಪಾಕ್”ಮೈಸೂರು ಮಲ್ಲಿಗೆ ಹೂವು, ಅರಿಶಿನ ಕುಂಕುಮ, ಬಳೆ, ಗುಲಾಬಿ ಹೂ ನೀಡಿ ಉಚಿತ ಪ್ರಯಾಣ ಬೆಳೆಸಿದ ಮಹಿಳೆಯರಿಗೆ ಆರತಿ ಎತ್ತಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರು ಮೈಸೂರಿನ ಉಸ್ತುವಾರಿ ಸಚಿವರಾದ ಎಚ್ ಸಿ ಮಹದೇವಪ್ಪನವರು, ಶಾಸಕರಾದ ಕೆ. ಹರೀಶ್ ಗೌಡ, ಡಿಸಿಸಿ ಅಧ್ಯಕ್ಷ ರಾದ ಆರ್ ಮೂರ್ತಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ನಾಗಭೂಷಣ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಸುನಿಲ್, ಹಿಂದುಳಿದ ವರ್ಗದ ನಾಗೇಶ್, ಲೋಕೇಶ್ ಮಾದಾಪುರ, ಯೋಗೇಶ್ ಉಪ್ಪಾರ್, ಮಾಜಿ ಮೇಯರ್ ಗಳಾದ ಪುಷ್ಪಲತಾ ಚಿಕ್ಕಣ್ಣ, ರಾಜೇಶ್ವರಿ, ಮಹಿಳಾ ಮುಖಂಡರುಗಳಾದ ಸೌಮ್ಯ ಅಶೋಕ್, ಪುಷ್ಪವಲ್ಲಿ, ಎ ನೇಹಾ, ಭಾಸ್ಕರ್ ಗೌಡ, ಕೆಪಿಸಿಸಿ ವಕ್ತಾರರಾದ ಹೆಚ್ಎ ವೆಂಕಟೇಶ್, ಹಿಂದುಳಿದ ವರ್ಗದ ಶಿವರಾಂ ಸೇವಾದಳದ ಎಸ್ ಎನ್ ರಾಜೇಶ, ಸಮೀರ್ ಅಹ್ಮದ್, ಅಭಿ, ಮೋಹನ್, ಪವನ್ ಸಿದ್ದರಾಮ, ಟಿ ಕೆ ಬಡಾವಣೆಯ ಮಹೇಶ್, ಧನಫಾಲ್, ಹಲವಾರು ಮುಖಂಡರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *