ಕೊಲ್ಕತ್ತ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ ಪಾಸಿಟಿವ್: KKR – RCB ಪಂದ್ಯ ಮುಂದೂಡಿಕೆ

1 min read

ಕ್ರಿಕೆಟ್: ವಿವೋ ಐಪಿಎಲ್ T-20ಯ ಇಂದಿನ ಪಂದ್ಯ ರದ್ದಾಗಿದ್ದು, ಇಂದಿನ ಪಂದ್ಯವನ್ನ ಮುಂದೂಡಲಾಗಿದೆ. ಕೆಕೆಆರ್ ಹಾಗೂ ಆರ್‌ಸಿಬಿ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯದಲ್ಲಿ ಕೆಕೆಆರ್ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ ಪಾಸಿಟಿವ್ ಆದ ಕಾರಣ ತಾತ್ಕಾಲಿಕವಾಗಿ ಇಂದಿನ ಪಂದ್ಯವನ್ನು ಮುಂದೂಡಲಾಗಿದೆ.

ದೇಶಕ್ಕೆ ದೇಶವೇ ಕೋವಿಡ್‌ನಿಂದ ನಲುಗುವಾಗ ಪ್ರೇಕ್ಷಕರಿಲ್ಲದೆ ಕ್ರಿಕೆಟ್ ನಡೆಸಲು ಬಿಸಿಸಿಐ ಮುಂದಾಗಿತ್ತು. ಇದೀಗಾ ಈ ವೇಳೆಯು ಸಹ ಕೆಕೆಆರ್ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ ಬಂದಿದ್ದು, ಇದೀಗಾ ತಂಡದ ಎಲ್ಲ ಆಡಗಾರರಿಗು ಆತಂಕ ಶುರುವಾಗಿದೆ. ಈ ಕಾರಣದಿಂದಲೇ ಇಂದಿನ ಪಂದ್ಯವನ್ನು ಸಹ ರದ್ದುಗೊಳಿಸಿ ಮುಂದೂಡಲಾಗಿದೆ.

ಈ ಮಾಹಿತಿಯನ್ನ ಖುದ್ದು ಆಯೋಜಕರೇ ನೀಡಿದ್ದು, ಇಂದಿನ ಪಂದ್ಯ ಯಾವ ದಿನಾಂಕ ಎಂದು ನಿಗಧಿ ಮಾಡಿಲ್ಲ.

About Author

Leave a Reply

Your email address will not be published. Required fields are marked *