ಬಿಜೆಪಿ ನಾಯಕರನ್ನ ನಾಯಿಗಳಿಗೆ ಹೊಲಿಸಿದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್
1 min readಮೈಸೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಏನ್ ನಡೆಯುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕದಲ್ಲಿ ಏನ್ ನಡೆಯುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ. ಹುಚ್ಚರ ದರ್ಬಾರಂತೆ ಏನೇನೋ ನಿರ್ಧಾರ ಮಾಡ್ತಾರೆ. ಏಕಾಏಕಿ ಲಾಕ್ಡೌನ್ ಅಂತಾರೆ, ಸರಿಯಾದ ನಿರ್ಣಯ ಇಲ್ಲ. ಸ್ವತಹ ಬಿಜೆಪಿ ಪಕ್ಷದ ಮುಖಂಡರು, ಸಂಸದರಿಗು ಗೊತ್ತಿಲ್ಲ. ರೆಸಾರ್ಟ್, ತೋಟ ಸೇರಿ ಅಲ್ಲಿ ಇಲ್ಲಿ ಸೇರಿಕೊಂಡಿದ್ದಾರೆ. ಅವರೆಲ್ಲ ಯಾರು ಕಣ್ಣಿಗೆ ಕಾಣ್ತಿಲ್ಲ. ಅವರ ಅಕೌಂಟ್ನಲ್ಲಿರುವ ದುಡ್ಡು ಝೀರೋ ಆಗವರೆಗು ಬರೋದಿಲ್ಲ ಎಂಬಂತೆ ಕಾಣ್ತಿದೆ. ಅದನ್ನ ಅವರೇ ನಿರ್ಧಾರ ಮಾಡಿಕೊಂಡಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿ ಕಡಿತ ವಿಚಾರ:
ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ನಿಂದ ಪೋಸ್ಟ್ ಕಾರ್ಡ್ ಚಳುವಳಿ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಪತ್ರ ಚಳುವಳಿ ಮಾಡಲಿದ್ದೇವೆ. ರಾಜ್ಯದ ಜನತೆಯ ಅಭಿಪ್ರಾಯ ಸಂಗ್ರಹಿಸಲು ಪೋಸ್ಟ್ ಕಾರ್ಡ್ ಚಳುವಳಿ ಮಾಡಲಾಗುವುದು. 5 ಕೆಜಿ ಅಕ್ಕಿಯನ್ನ 2 ಕೆಜಿಗೆ ಇಳಿಸಿದ್ದಾರೆ ಎಂದು ಗರಂ ಆದರು.
ಇನ್ನು ಸಚಿವ ಉಮೇಶ್ ಕತ್ತಿ ಹೇಳಿಕೆ ಗರಂ ಆದ ಲಕ್ಷ್ಮಣ್ ಇದು ಬಿಜೆಪಿಯವರ ಮನಃಸ್ಥಿತಿ ಏನು ಎಂಬುದು ಗೊತ್ತಾಗುತ್ತೆ. ಮಿಸ್ಟರ್ ಕಟೀಲ್ ಎಲ್ಲಿದ್ದೀರಿ ನೀವೂ.? ನಿಮಗೂ ಏನಾದರೂ ಕೊರೊನಾ ಬಂದಿದೆಯಾ..? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ಗೆ ಲಕ್ಷ್ಮಣ್ ಪ್ರಶ್ನೆ. ಕಟೀಲ್ ಯೂಸ್ ಲೆಸ್ ರಾಜ್ಯಾಧ್ಯಕ್ಷ ಎಂದು ಆಕ್ರೋಶ ಹೊರಹಾಕಿದ ಲಕ್ಷ್ಮಣ್.
ಕಾಂಗ್ರೆಸ್ ಸಣ್ಣ ತಪ್ಪು ಮಾಡಿದ್ರು ಬೀದಿ ನಾಯಿಗಳ ಥರ ಬೊಗಳುತ್ತ ಹೊರಗೆ ಬರುತ್ತಿದ್ರಿ. ಈಗ ರಾಜ್ಯದಲ್ಲಿ ಸಾಯುತ್ತಿರುವ ಜನರನ್ನು ನೋಡಿಯು ಹೊರಗೆ ಬರ್ತಿಲ್ಲ ಎಂದು ಬಿಜೆಪಿ ನಾಯಕರನ್ನ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ನಾಯಿಗಳಿಗೆ ಹೊಲಿಸಿದ್ದಾರೆ.
ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಆಸ್ಪತ್ರೆಗಳಿಗೆ ಕರೋನಾ ನಿಯಂತ್ರಣ ಔಷಧಿಯನ್ನು ನೀವೂ ಸರಿಯಾಗಿ ತಲುಪಿಸುತ್ತಿಲ್ಲ. ಇದು ಬಿಜೆಪಿ ಸ್ಯಾಡಿಸ್ಟ್ ಮನಸ್ಥಿತಿಯಾಗಿದೆ. ಔಷಧಿ ಹಂಚಿಕೆಯಲ್ಲು ಬಿಜೆಪಿ ಆಸ್ಪತ್ರೆ ಕಾಂಗ್ರೆಸ್ ಆಸ್ಪತ್ರೆ ಎಂದು ನೋಡುತ್ತಿರುವುದು. ನಿಮ್ಮ ಕೆಟ್ಟ ಮನಸ್ಥಿತಿಗೆ ಸಾಕ್ಷಿ ಎಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಲಕ್ಷ್ಮಣ್ ಹರಿಹಾಯ್ದಿದ್ದಾರೆ.