ಇಬ್ಬರು ಸರಗಳ್ಳರ ಬಂಧನ: 4,27,500 ರೂ. ಮೌಲ್ಯದ 95 ಗ್ರಾಂ ಚಿನ್ನ ವಶಕ್ಕೆ
1 min readಮೈಸೂರು,ಜ.21-ಇಬ್ಬರು ಸರಗಳ್ಳರನ್ನು ಬಂಧಿಸಿರುವ ಕುವೆಂಪುನಗರ ಪೊಲೀಸರು ಅವರಿಂದ 4,27,500 ರೂ. ಮೌಲ್ಯದ 95 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಜ.14 ರಂದು ಕುವೆಂಪುನಗರ ಠಾಣಾ ವ್ಯಾಪ್ತಿಯ ರಾಮಕೃಷ್ಣನಗರ ಐ ಬ್ಲಾಕ್ನಲ್ಲಿ ಸರಗಳ್ಳತನ ನಡೆದಿದ್ದು, ಈ ಪ್ರಕರಣದ ತನಿಖೆ ಕೈಗೊಂಡ ಕುವೆಂಪುನಗರ ಪೊಲೀಸರು ಜ.17 ರಂದು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ವಿಚಾರಣೆ ಮಾಡಿದಾಗ ಆರೋಪಿಗಳು ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ 1 ಸರಗಳ್ಳತನ ಮಾಡಿರುವುದಾಗಿ ತಿಳಿಸಿದರು. 3 ಸರಗಳ್ಳತನ ಪ್ರಕರಣಗಳಿಂದ ಒಟ್ಟು ರೂ. 4,27,500 ಮೌಲ್ಯದ 95 ಗ್ರಾಂ ತೂಕದ ಮೂರು ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ಗೀತಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯಕ್ತರಾದ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಅವರ ನೇತೃತ್ವದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಕೆ.ಷಣ್ಮುಗ ವರ್ಮ, ವಿದ್ಯಾರಣ್ಯಪುರಂ ಠಾಣೆಯ ಇನ್ ಸ್ಪೆಕ್ಟರ್ ಜಿ.ಸಿ.ರಾಜು, ಪಿಎಸ್ಐ ಸಿ.ಇರ್ಷಾದ್, ಸೆನ್ ಪೊಲೀಸ್ ಠಾಣೆ ಪಿಎಸ್ಐ ಎನ್.ಅನಿಲ್ ಕುಮಾರ್, ಸಿಬ್ಬಂದಿಗಳಾದ ಎಂ.ಪಿ.ಮಂಜುನಾಥ, ಯೋಗೇಶ, ಪುಟ್ಟಪ್ಪ, ಹರ್ಷವರ್ಧನ, ಹಜರತ್ ಅಲಿ, ನಾಗೇಶ, ಶ್ರೀನಿವಾಸ, ಮಾದೇಶ್, ಕೃಷ್ಣರಾಜ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಪ್ರಶಂಶಿಸಿದ್ದಾರೆ.