5 ಸಾವಿರ ಗಡಿಯತ್ತ ಓಮಿಕ್ರಾನ್ ಸೋಂಕು!

1 min read

ನವದೆಹಲಿ,ಜ.12-ಕೋವಿಡ್ ನ ರೂಪಾಂತರಿ ಓಮಿಕ್ರಾನ್ ಸೋಂಕು 5 ಸಾವಿರ ಗಡಿಯತ್ತ ಕಾಲಿಟ್ಟಿದೆ.
ಓಮಿಕ್ರಾನ್ ದಿನೇ ದಿನೇ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿದ್ದು, ಇಲ್ಲಿಯವರೆಗೆ 4,868 ಓಮಿಕ್ರಾನ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳು 2 ಲಕ್ಷ ಗಡಿಯತ್ತ ಇದ್ದು, ಕಳೆದ 24 ಗಂಟೆಗಳಲ್ಲಿ 1,94,720 ಕೊರೊನಾ ಪ್ರಕರಣಗಳು ವರದಿಯಾಗಿವೆ. ಮಂಗಳವಾರ ವರದಿಯಾಗಿದ್ದ 1.68 ಲಕ್ಷ ಪ್ರಕರಣಗಳಿಗಿಂತ ಶೇ. 15.8 ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ 1,281,ರಾಜಸ್ಥಾನದಲ್ಲಿ 645 ಓಮಿಕ್ರಾನ್ ಸೋಂಕಿತರಿದ್ದಾರೆ. ರಾಜ್ಯದಲ್ಲಿಯೂ ಕೊರೊನಾ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಒಂದೇ ದಿನ 14,473 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 10,800 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ. 10.30 ಇದೆ.
ಕೋವಿಡ್‌ನ ಓಮಿಕ್ರಾನ್ ರೂಪಾಂತರ ಸೋಂಕನ್ನು ತಡೆಯಲಾಗದು. ಪ್ರತಿಯೊಬ್ಬರೂ ಅಂತಿಮವಾಗಿ ಸೋಂಕಿಗೆ ಒಳಗಾಗುತ್ತಾರೆ. ಬೂಸ್ಟರ್ ಲಸಿಕೆ ಡೋಸ್‌ಗಳು ವೈರಸ್‌ನ ವೇಗದ ಹರಡುವಿಕೆಯನ್ನು ತಡೆಯುವುದಿಲ್ಲ ಎಂದು ಉನ್ನತ ಸರ್ಕಾರಿ ತಜ್ಞರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

About Author

Leave a Reply

Your email address will not be published. Required fields are marked *