ಸೂರ್ಯಗ್ರಹಣದ ಫಲಾಫಲ ಏನು!? ಭಯಬೇಡ- ಈ‌ ನಿಯಮ ಪಾಲನೆ ಮಾಡಿ ಸಾಕು!

1 min read

ಶ್ರೀಮಾಯಕಾರ ಪ್ರಭುವೇ ನಮಃ ಶ್ರೀ ಮಾಯಕಾರ ಗುರುಕುಲ, ಮೈಸೂರು

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ

ಸೂರ್ಯಗ್ರಹಣ: ಸೂರ್ಯಗ್ರಹಣವು ಡಿಸೆಂಬರ್ 4, 2021 ರಂದು ಸಂಭವಿಸಲಿದೆ. ಅಮಾವಾಸ್ಯೆಯಂದು ಸಂಭವಿಸಲಿದ್ದು ಶನಿವಾರ 10:59 ಕ್ಕೆ ಪ್ರಾರಂಭವಾಗಿ 3:07 ಕ್ಕೆ ಕೊನೆಗೊಳ್ಳುತ್ತದೆ.

ಗ್ರಹಣವು ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ಅಟ್ಲಾಂಟಿಕ್ನ ದಕ್ಷಿಣ ಭಾಗ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಗೋಚರಿಸುತ್ತದೆ. ಇದು ದೀರ್ಘ ಕಾಲದ ಗ್ರಹಣವಾಗಿದೆ. ಈ ಗ್ರಹಣವನ್ನು ಕೇತುಗ್ರಸ್ತ , ಛಾಯ, ಸೂತಕ ಗ್ರಹಣವೆಂದು ಕರೆಯುತ್ತೇವೆ. ಸೂರ್ಯಗ್ರಹಣವು ವೃಶ್ಚಿಕ ರಾಶಿಯಲ್ಲಿ ಘಟಿಸುತ್ತಿರುವುದರಿಂದ ರಾಸಾಯನಿಕ ವಸ್ತುಗಳಿಂದ ಅಪಘಾತಗಳು ಹೆಚ್ಚುತ್ತವೆ.

ಈ ಗ್ರಹಣವು ಇಂಧ್ರ ಮಂಡಲದಲ್ಲಿ ಆಗುವುತ್ತಿರುವುದರಿಂದ ಮೋಡಗಳು ಶಬ್ದವನ್ನು ಮಾಡಿ,‌ ಮೋಡಗಳಿಂದ ಸಿಡಿಲು ಮಿಂಚು ಕಾಣಿಸಿಕೊಳ್ಳುತ್ತದೆ. ಮೋಡಗಳು ಎಮ್ಮೆಯ ಕೊಂಬಿನಂತೆ ಅಲ್ಲಲ್ಲಿ ಕಾಣುತ್ತವೆ. ಕಪ್ಪು ನೊಣಗಳ ಗುಂಪು ಕಾಣಿಸಿಕೊಳ್ಳುತ್ತದೆ. ತಾನಾಗಿಯೇ ಮಳೆ ಕಾಣಿಸಿಕೊಳ್ಳುತ್ತದೆ. ಕುಟುಂಬದ ಯಜಮಾನನಿಗೆ, ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಿಗೆ ಅಪಾಯ, ಹೆಸರಾಂತ ವ್ಯಕ್ತಿ, ರಾಜ, ರಾಜಕಾರಿಣಿಗಳು ಗತಿಸುತ್ತಾರೆ ಭೇದಿ, ಹೊಟ್ಟೆನೋವು, ಗಂಟಲು ತೊಂದರೆ, ಬಾಯಿಯ ವ್ಯಾದಿಗಳು, ಕೆಮ್ಮು ಎಲ್ಲರನ್ನೂ ಪೀಡಿಸುತ್ತದೆ.

ಕಾಶಿ, ಸೌರಾಷ್ಟ್ರ, ಮಾಳವ ದೇಸ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರಾವಳಿ ಪ್ರದೇಶ, ಎತ್ತರದ ಪ್ರದೇಶಗಳು, ಧಾರ್ಮಿಕ ಕ್ಷೇತ್ರಗಳು, ಸೈನಿಕರಿಗೆ ತೊಂದರೆ ಹಾಗೂ ಅಲ್ಜಿರಿಯಾ, ಮೊರಕೊ, ನಾರ್ವೆ, ಉತ್ತರ ಸೀರಿಯಾ, ಕ್ವಿನ್ಸ್ ಲ್ಯಾಂಡ್, ಸೂರತ್, ಬ್ರೆಜಿಲ್, ವಾಷಿಂಗ್ ಟನ್, ಸ್ವೀಡನ್, ಡೆನ್ಮಾರ್ಕ್, ಪನಾಮಾ, ಬಾರ್ಬಡೋಸ್, ನಾರ್ವೆ, ಅಂಟಿಗೋವಾ, ಜಾಂಬಿಯಾ, ಕಾಮಭೊಡಿಯಾ, ಡೊಮಿನಿಕಾ, ಲೆಬೆನಾನ್ಮ ನ್ಯೂವೆಲ್ಸ್ ( ಆಸ್ಟ್ರೇಲಿಯಾ), ಲ್ಯಾಂಡ್(ಕೆನೆಡಾ), ಚೀನಾ, ಫೆಸಿಪಿಕ್ ಸಾಗರ, ದಕ್ಷಿಣಾ ಕೋರಿಯಾ ದೇಶ ನಗರಗಳಿಗೆ ತೊಂದರೆ.

ಭೂಮಿ ಉತ್ಪಾತ (ಭೂಮಿಯಲ್ಲಿ ಅಸಹಜವಾಗಿ ಪರಿಣಾಮ ಸಂಭವಿಸುವುದು) ಅಂತರಿಕ್ಷ ಉತ್ಪಾತ (ಆಕಾಶದಲ್ಲಿ ಅಸಹಜವಾಗಿ ಪರಿಣಾಮ ಸಂಭವಿಸುವುದು) ದಿವ್ಯ ಉತ್ಪಾತ (ಭೂಮಿಯೊಳಗೆ ಅಸಹಜವಾಗಿ ಪರಿಣಾಮ ಸಂಭವಿಸುವುದು) ಈ ರೀತಿಯ ಮೂರು ಉತ್ಪಾತಗಳು ಮುಂದಿನ ದಿನಗಳಲ್ಲಿ ಸಂಭವಿಸುತ್ತವೆ

ಸೂರ್ಯಗ್ರಹಣದಲ್ಲಿ ಬುಧನ ಸಂಬಂಧವಿರುವುದರಿಂದ ಆಢಳಿತ ಪಕ್ಷಗಳಲ್ಲಿ ಭಿನ್ನಭಿಪ್ರಾಯಗಳು, ತುಪ್ಪ, ಜೇನು, ಖಾಧ್ಯ ತೈಲಗಳ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತದೆ.

ಅನುರಾಧ , ಜ್ಯೇಷ್ಠ ನಕ್ಷತ್ರದಲ್ಲಿ ಗ್ರಹಣವಾಗುತ್ತಿರುವ ಕಾರಣ ಅವರೆ, ತೊಗರಿ, ಧಾನ್ಯಗಳು ಇಂಗು ಬೆಲೆ ಏರಿಕೆಯಾಗುತ್ತದೆ, ಕೆಡುತ್ತದೆ, ಕರ್ಪೂರ, ಪಾದರಸ, ಕಂಚು, ಹಿತ್ತಾಳೆ ಲೋಹಗಳೆ ಬೆಲೆ ಏರಿಕೆಯಾಗುತ್ತದೆ. ಸಾಮಾನ್ಯ ಜನರಿಗೆ ಆದಾಯ ಕಮ್ಮಿ ಖರ್ಚು ಜಾಸ್ತಿಯಾಗುತ್ತದೆ. ಮೋಸ ಮಾಡುವವರ ಸಂಖ್ಯೆ ಹೆಚ್ಚುತ್ತದೆ. ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಶನಿವಾರ ಬಂದಿರುವುದರಿಂದ ಅವಶ್ಯಕವಾದ ವಸ್ತುಗಳು ಹದಿನೈದು ದಿನಗಳ ನಂತರ ಬೆಲೆ ಏರಿಕೆಯಾಗುತ್ತದೆ.

ಗ್ರಹಣವು ಕಾರ್ತಿಕ, ಮಾರ್ಗಶಿರ ಮಾಸದಲ್ಲಿ ಸಂಭವಿಸುತ್ತಿರುವ ಕಾರಣ ಧಾನ್ಯಗಳ ನಷ್ಟ, ಬೆಳೆಗಳ ನಾಶವು, ಧಾರಣಿ(ಭೂಮಿ) ಕುಸಿತ ಉಂಟಾಗುವುದು ಆರು ತಿಂಗಳ ನಂತರ ಒಳ್ಳೆಯ ಬೆಳೆ, ಮಳೆ, ಸುಖವು ಉಂಟಾಗುತ್ತದೆ.

-19 ನವೆಂಬರ್ 2021 ರಂದು ಕಾರ್ತಿಕ ಮಾಸದಲ್ಲಿ ಗ್ರಹಣವಾಗಿದೆ, ಎಲ್ಲಾ ಕಡೆ ಅತಿ ಹೆಚ್ಚು ಮಳೆಯಿಂದ ಭೂಕುಸಿತ, ಬೆಳೆ ನಾಶವಾಗಿರುವುದನ್ನು ನೀವೆ ಕಾಣುತ್ತಿದ್ದೀರಿ.

ಈ ದಿನಗಳಲ್ಲಿ ಶುಭ ಕಾರ್ಯ ಮಾಡಬೇಡಿ

-ಅನುರಾಧ, ಜ್ಯೇಷ್ಠ ನಕ್ಷತ್ರದಲ್ಲಿ ಗ್ರಹಣ ಸಂಭವಿಸುತ್ತಿರುವ ಕಾರಣ ಮುಂದಿನ ಆರು ತಿಂಗಳು ಈ ನಕ್ಷತ್ರಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.

ಗ್ರಹಣ ನಕ್ಷತ್ರ ಫಲ

ವಿಶಾಖ, ಅನುರಾಧ, ಜ್ಯೇಷ್ಠ, ಮೂಲ ನಕ್ಷತ್ರದವರಿಗೆ ಗ್ರಹಣ ದೋಷವಿದೆ, ಮುಂದಿನ ತಿಂಗಳಲ್ಲಿ ಈ ನಕ್ಷತ್ರದವರು ತೊಂದರೆಯನ್ನು ಅನುಭವಿಸತ್ತಾರೆ.

ರಾಶಿ ಫಲ

ಮೇಷ: ಮೇಷ ರಾಶಿಯವರಿಗೆ 8 ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಮೃತ್ಯುಭಯ, ದೀರ್ಘರೋಗ ಬಾಧೆಯುಂಟಾಗುತ್ತದೆ.

ವೃಷಭ: ವೃಷಭ ರಾಶಿಯವರಿಗೆ 7 ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಗಂಡ ಹೆಂಡತಿಯರಲ್ಲಿ ಕಲಹ, ವಿವಾಹ ವಿಳಂಬ, ನಿಮ್ಮ ಕಳತೃ (ನಿಮ್ಮ ಗಂಡ / ಹೆಂಡತಿಗೆ ತೊಂದರೆ) ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಕೆಲಸ ಮಾಡುವ ಸ್ಥಳದಲ್ಲಿ ಕಿರಿಕಿರಿ.

ಮಿಥುನ: ಮಿಥುನ ರಾಶಿಯವರಿಗೆ 6ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಸೌಖ್ಯವು, ಸುಖ ಸಂತೋಷ ಪ್ರಾಪ್ತಿ.

ಕಟಕ: ಕಟಕ ರಾಶಿಯವರಿಗೆ 5ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಮಕ್ಕಳಿಗೆ ತೊಂದರೆ, ಗರ್ಭಿಣಿಯರಿಗೆ ತೊಂದರೆ, ಗರ್ಭಪಾತ ಸಂಭವಿಸಬಹುದು ಎಚ್ಚರ.

ಸಿಂಹ: ಸಿಂಹ ರಾಶಿಯವರಿಗೆ 4 ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಶರೀರ ಪೀಡೆ, ಅಪಘಾತ, ಆಸ್ತಿ ವಿಷಯದಲ್ಲಿ ಕಲಹ, ತಾಯಿಯ ಆರೋಗ್ಯದಲ್ಲಿ ಏರುಪೇರು.

ಕನ್ಯಾ: ಕನ್ಯಾ ರಾಶಿಯವರಿಗೆ 3ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಲಕ್ಷ್ಮೀ ಪ್ರಾಪ್ತಿಯು, ವ್ಯವಹಾರ ಲಾಭವು.

ತುಲಾ: ತುಲಾ ರಾಶಿಯವರಿಗೆ 2 ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಕುಟುಂಬ ಕಲಹ, ಆರ್ಥಿಕ ನಷ್ಟ, ಸಾಲಬಾಧೆ, ವಿದ್ಯಾಭ್ಯಾಸದಲ್ಲಿ ತೊಂದರೆ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಜನ್ಮ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಅಪಮೃತ್ಯುಭಯ, ಶರೀರ ಪೀಡೆ, ಅವಮಾನ.

ಧನಸ್ಸು: ಧನಸ್ಸು ರಾಶಿಯವರಿಗೆ 12ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಅಪಾಯ, ನಷ್ಟವು

ಮಕರ: ಮಕರ ರಾಶಿಯವರಿಗೆ 11 ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಲಾಭವು.

ಕುಂಭ: ಕುಂಭ ರಾಶಿಯವರಿಗೆ 10 ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಸುಖ ಪ್ರಾಪ್ತಿ, ವ್ಯವಹಾರ, ವೃತ್ತಿ ಲಾಭ.

ಮೀನ: ಮೀನ ರಾಶಿಯವರಿಗೆ 9ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ತಂದೆಗೆ ತೊಂದರೆ, ಮಾನನಾಶ, ಅನವಶ್ಯಕ ಖರ್ಚು.

ಗ್ರಹಣ ಕಾಲದಲ್ಲಿ ಜನಿಸಿದ ಮಕ್ಕಳ ಫಲ

ಗ್ರಹಣ ಕಾಲದಲ್ಲಿ ಜನಿಸಿದರೆ ಅಥವಾ ಆ ದಿನ ಜನನವಾದರೆ – ಅತ್ಯಧಿಕ ಅಶುಭಪರಿಣಾಮವುಂಟಾಗುತ್ತದೆ. ಜನಿಸಿದ ಮಗುವನ್ನು ರಕ್ಷಿಸಲಾಗದು. ಇದರಿಂದ ಅರಿಷ್ಟ ಯೋಗವಾಗುತ್ತದೆ. ಈ ಕಾಲದಲ್ಲಿ ಜನಿಸಿದ ಸ್ತ್ರೀಯಾಗಲಿ ಅಥವಾ ಪುರುಷನಾಗಲಿ ಬದುಕುಳಿದರೆ ದುರುಳರಾಗಿ ಅಥವಾ ಶಾಪಗ್ರಸ್ತರಾಗಿ; ಕಷ್ಟಗಳನ್ನು ಅನುಭವಿಸುತ್ತಾರೆ. ಎಲ್ಲಾ ಕಾಲದಲ್ಲೂ ಹಣದ ಮುಗ್ಗಟ್ಟು ಮತ್ತು ತೊಂದರೆಗಳೆಂದು ವರಹಮಿಹಿರರು ಹೇಳುತ್ತಾರೆ.‌

ವಸಿಷ್ಠರು – ಈ ಕಾಲದಲ್ಲಿ ಜನಿಸಿದವರು ಸಮಸ್ಯೆಗಳಿಂದ ಕೂಡಿದ ವ್ಯಾಧಿಗಳಿಗೆ ತುತ್ತಾಗುತ್ತಾರೆ ಎಂದು ಹೇಳುತ್ತಾರೆ.

ಪರಾಶರ – ಈ ಕಾಲದಲ್ಲಿ ಜನಿಸುವಾಗ ಲಗ್ನದಲ್ಲಿ ಅಥವಾ ಲಗ್ನಕ್ಕೆ ಕುಜ ಮತ್ತುಶನಿಯ ಸಂಬಂಧ ಬಂದರೆ – ಬಾಲ್ಯದಲ್ಲಿಯೇ ಮರಣ ಹೊಂದಿತ್ತಾರೆಂದು ಹೇಳುತ್ತಾರೆ.

ಪರಿಹಾರ

ಗ್ರಹಣ ದೋಷವಿರುವ ನಕ್ಷತ್ರದವರು, ರಾಶಿಯವರು ಮತ್ತು ಮಕ್ಕಳು ಜನನವಾಗಿದ್ದರೆ ನವಗ್ರಹ ಜಪ ಪೂಜೆ ಮಾಡಿಸಿ, ಉಪರಾಗ ಶಾಂತಿ ಮಾಡಿಸಿ ನವಗ್ರಹ ಧಾನ್ಯ, ಹೆಚ್ಚಾಗಿ ಗೋಧಿ, ಗೋಮಾತೆ ಹುಲ್ಲನ್ನು ಕೊಡಿ. ಸೂರ್ಯ ಸ್ತೋತ್ರ, ಅಷ್ಟೋತ್ತರ ಪಠಿಸಿ ಶಿವನ ದರ್ಶನ ಮಾಡಿ

ಅನಿಷ್ಟ ಗ್ರಹಣ ದೋಷಕ್ಕೆ ಔಷಧಿ ಸ್ನಾನ

-ದೊಡ್ಡ ಸಾಸಿವೆ, ಅರಿಶಿನ, ಮರದ ಅರಿಶಿನ, ಚಂಗಲ ಕೋಷ್ಠ, ಲೋಧ್ರ ಚೆಕ್ಕೆ, ಮುರಾಮಾಂಸಿ ಅಥವಾ ಭತ್ತದ ಅರಳು, ಬಾಳೆಯ ಬೇರು ಔಷದಗಳನ್ನು ಜಲದಲ್ಲಿ ಹಾಕಿ ಸ್ನಾನ ಮಾಡುವುದರಿಂದ ಗ್ರಹಣ ದೋಷದ ಅನಿಷ್ಟ ಫಲಗಳು ನಿವಾರಣೆಯಾಗುತ್ತವೆ.

ಗ್ರಹಣದ ದಿನ ಇದನ್ನು ತಪ್ಪದೆ ಪಾಲಿಸಿ

ಸೂರ್ಯಗ್ರಹಣದ ಸಮಯದಲ್ಲಿ ಬರೀಗಣ್ಣಿನಿಂದ ಸೂರ್ಯನನ್ನು ನೋಡಬೇಡಿ. ಗರ್ಭಿಣಿಯರು ಮನೆಯಿಂದ ಹೊರಗೆ ಬರಬೇಡಿ. ಸೂರ್ಯಗ್ರಹಣದ ಸಮಯದಲ್ಲಿ ನಿದ್ರೆ, ಸ್ನಾನ, ಊಟ ಅಥವಾ ಪ್ರಯಾಣ ಮಾಡಬೇಡಿ. ಯಾವುದೇ ಹಣ, ಕಾಸಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಒಪ್ಪಂದವನ್ನು ಮಾಡಿಕೊಳ್ಳವುದು, ಹೊಸ ಕೆಲಸ ಪ್ರಾರಂಭಿಸುವುದು ಬೇಡ. ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನವನ್ನು ಮಾಡಿ ಶುಚಿಯಾಗಿರಿ. ಗ್ರಹಣದ ಕಾಲದಲ್ಲಿ ದೇವರ ಸ್ತೋತ್ರಗಳನ್ನು, ಮಂತ್ರಗಳನ್ನು ಪಠಿಸಿ. ಗ್ರಹಣ ಮುಗಿದ ನಂತರ ಮತ್ತೊಮ್ಮೆ ಸ್ನಾನ ಮಾಡಬೇಕು. ಗ್ರಹಣ ಮುಗಿದ ನಂತರ ಪ್ರಸಾದವನ್ನು ಸ್ವೀಕರಿಸಿ, ಆಹಾರ ಸೇವನೆ ಮಾಡಬಹುದು.( ಅನಾರೋಗ್ಯವಿರುವವರು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಿ)
ಧನ್ಯವಾದಗಳೊಂದಿಗೆ

ನಿಮ್ಮ…

ಶ್ರೀ ಮೂಗೂರು ಮಧುದೀಕ್ಷಿತ್ ಗುರೂಜಿ
ಪಂಚಾಂಗ ಕರ್ತರು, ಸಂಸ್ಥಾಪಕರು, ಶ್ರೀ ಮಾಯಕಾರ ಗುರುಕುಲ, ಮೈಸೂರು

ಗಮನಿಸಿ :- ನೇರಭೇಟಿಗಾಗಿ, ಜ್ಯೋತಿಷ್ಯ, ವಾಸ್ತು ಸಲಹೆಗಾಗಿ ಹಾಗೂ ಜ್ಯೋತಿಷ್ಯ, ವಾಸ್ತು, ಪ್ರಶ್ನಶಾಸ್ತ್ರ, ಅಷ್ಟಮಂಗಲಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಕಲಿಯಲು ಸಂಪರ್ಕಿಸಿ

7411161111, 9945415341

About Author

Leave a Reply

Your email address will not be published. Required fields are marked *