ದಸರೆಯ ಮೊದಲ ಕಾರ್ಯಕ್ರಮಕ್ಕೆ ಕ್ಷಣಗಣನೆ- ಗಜಪಯಣಕ್ಕೆ ಸಕಲ ಸಿದ್ದತೆ!

1 min read

ಮೈಸೂರು ದಸರಾ : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಯ ಮೊದಲ ಕಾರ್ಯಕ್ರಮಕ್ಕೆ ಇಂದು ಚಾಲನೆ ಸಿಗಲಿದ್ದು, ಕಾಡಿನಿಂದ ನಾಡಿಗೆ ಗಜಪಯಣ ಆರಂಭವಾಗಲಿದೆ. ಇಂದು ಬೆಳಗ್ಗೆ 10ಕ್ಕೆ ಹುಣಸೂರಿನ ವೀರನಹೊಸಳ್ಳಿ ಗ್ರಾಮದಲ್ಲಿ ಅತಿಥಿ ಗಣ್ಯರ ಸುಮ್ಮುಖದಲ್ಲಿ ಗಜಪೂಜೆ ನೆರವೇರಿಸಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತೆ. ಇದಕ್ಕಾಗಿ ತಳಿರು ತೋರಣದಿಂದ ಹುಣಸೂರಿನ ವೀರನಹೊಸಹಳ್ಳಿ ಗ್ರಾಮ ಕಂಗೊಳಿಸುತ್ತಿದ್ದು ಗಜಪಯಣಕ್ಕೆ ಪುಷ್ಪಾರ್ಷನೆಯ ಸ್ವಾಗತ ಸಿಗಲಿದೆ.

ಸರಳ ದಸರಾ- ಸಾಂಪ್ರಾದಾಯಿಕ ದಸರಾ

ಆನೆಗಳಿಗೆ ಪೂಜೆ..

ಈ ಬಾರಿ ಕೊರೋನಾ ಮತ್ತೆ ಹೆಚ್ಚಾಗುವ ಕಾರಣದಿಂದ ಕಳೆದ ಬಾರಿಯಂತೆ ಈ ಬಾರಿಯು ಅರಮನೆಗೆ ಮಾತ್ರ ಜಂಬೂ ಸವಾರಿ ಸೀಮಿತವಾಗಲಿದೆ. ಅಲ್ಲದೆ, ರಿಹರ್ಸಲ್ ಕೂಡ ಅರಮನೆಯ ಅಂಗಳದೊಳಗೆ ನಡೆಯಲಿದೆ. ಇದರಿಂದ ಇಂದು ಮೈಸೂರಿಗೆ ಗಜಪಯಣ ಬೆಳೆಸಲಿದ್ದು, ನೇರವಾಗಿ ಅಶೋಕಪುರಂನ ಅರಣ್ಯ ಭವನಕ್ಕೆ ಆನೆಗಳು ಬರಲಿವೆ. ಇಲ್ಲಿ ಮೂರು ದಿನ ಉಳಿದು ಸೆ.16ಕ್ಕೆ ಅರಮನೆ ಪ್ರವೇಶಕ್ಕೆ ದಿನಾಂಕ ನಿಗಧಿಯಾಗಿದ್ದು, ಮಧ್ಯಾಹ್ನ ಗಜಪೂಜೆ ನಡೆಸಿ ಅರಮನೆಗೆ ಗಜಪಡೆಗೆ ಸ್ವಾಗತ ಕೋರಲಾಗುತ್ತೆ.

ದಸರಾ ಜಂಬೂಸವಾರಿಯ ಗಜಪಡೆ

ಅಭಿಮನ್ಯು.
ಗೋಪಾಲಸ್ವಾಮಿ,
ವಿಕ್ರಮ,
ಕಾವೇರಿ,
ಧನಂಜಯ,
ಅಶ್ವತ್ಥಾಮ,
ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ಈ ಬಾರಿಯ ದಸರೆಯಲ್ಲಿ‌ ಭಾಗಿಯಾಗಲಿವೆ.

About Author

Leave a Reply

Your email address will not be published. Required fields are marked *