ಕಿರುರಂಗಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
1 min readಮೈಸೂರು: ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದಲ್ಲಿ ಭಾನುವಾರ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಆಚರಿಸಲಾಯಿತು.
ಶಾಸಕರಾದ ಎಲ್. ನಾಗೇಂದ್ರ ಅವರು ಪುಷ್ಪಾರ್ಚನೆ ಸಲ್ಲಿಸಿ, ಪ್ರಪಂಚದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಯಾದವ ಸಂಘದ ವತಿಯಿಂದ ಫೋಟೋಗ್ರಫಿಯಲ್ಲಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾದ ಗೋಪಿನಾಥ್ ಯಾದವ್ ಹಾಗೂ ವೈವಾಹಿಕ ಜೀವನದ ಜೊತೆ ಎಂ.ಕಾಂ, ಎಂ.ಫಿಲ್ ಹಾಗೂ ಪಿ.ಹೆಚ್.ಡಿ ವ್ಯಾಸಾಂಗ ಮಾಡಿದ ಅರ್ಚನ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಡಿಸಿ ಬಿ.ಎಸ್. ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ, ಯಾದವ ಸಂಘದ ಉಪಾಧ್ಯಾಕ್ಷರಾದ ವೆಂಕಟಾಚಲ, ಪದಾಧಿಕಾರಿಗಳಾದ ಯದುರಾಜ್,ಪುಷ್ಪ ವಲ್ಲಿ, ವಿ.ಸತ್ಯನಾರಾಯಣ, ತುಕಾರಾಮ್, ಸ್ವಾಮಿ, ಬಾಲ ರಾಮ್, ಶ್ರೀಕಾಂತ್ , ನಾಗೇಶ್ ಯಾದವ್ ಹಾಗೂ ಇನ್ನಿತರರು ಭಾಗವಹಿಸಿದ್ದರು.