ಮೈಸೂರು ಚಿನ್ನದಂಗಡಿಯಲ್ಲಿ ಫೈರಿಂಗ್ ಪ್ರಕರಣ- ಮೃತ ಚಂದ್ರುಗೆ 5 ಲಕ್ಷ ಪರಿಹಾರ- ರಾಮದಾಸ್!
1 min readಮೈಸೂರು ಕೃಷ್ಣರಾಜ ಕ್ಷೇತ್ರದ ವಾರ್ಡ್ ನಂ.61 ರ ವ್ಯಾಪ್ತಿಗೆ ಬರುವ ಚಾಮುಂಡಿ ವನದ ಸಮೀಪ ಇರುವ ಅಮೃತ್ ಗೋಲ್ಡ್ ಪ್ಯಾಲೇಸ್ ನಲ್ಲಿ ನಿನ್ನೆ ದುರ್ಘಟನೆ ನಡೆದಿದ್ದು ಇಂದು ಶಾಸಕ ಎಸ್.ಎ.ರಾಮದಾಸ್ ಪೋಲಿಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ಚಂದ್ರು ತಂದೆ ರಂಗಸ್ವಾಮಿ ಅವರಿಗೆ ಪರಿಹಾರದ ರೂಪದಲ್ಲಿ 5 ಲಕ್ಷ ರೂ ಗಳನ್ನು ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿದ್ದು ತಕ್ಷಣವೇ ಅವರ ಕುಟುಂಬಕ್ಕೆ ಪರಿಹಾರವನ್ನು ತಲುಪಿಸಲಾಗುವುದು ಎಂದು ಶಾಸಕ ರಾಮದಾಸ್ ತಿಳಿಸಿದರು.
ಜನರಲ್ಲಿ ಭಯದ ವಾತಾವರಣ ಮೂಡಿರುವುದು ಸಹಜ. ಈ ದೃಷ್ಟಿಯಲ್ಲಿ ಕೆ.ಆರ್ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಯ ಮುಖ್ಯಸ್ಥರನ್ನು ಕರೆದು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ರಹಿತವಾಗಿ ಮಾಡಲು ಕಳೆದ 6 ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೂ ಈ ಅಹಿತಕರ ಘಟನೆ ನಡೆದಿರುವುದು ದುಃಖಕರ ಜನರ ಹಿತದೃಷ್ಟಿಯಿಂದ ನಾಳೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಠಾಣಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಹಾಗೂ ವ್ಯಾಪಾರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೂ ಕರೆದು ಧೈರ್ಯ ತುಂಬಲಾಗುವುದು ಎಂದರು.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಅಪರಾಧಿಗಳನ್ನ ಬಂಧಿಸುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದ್ದೇನೆ ಎಂದರು.