ನಾಳೆ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ವರ್ದಂತಿ ಉತ್ಸವ!
1 min readಮೈಸೂರು : ನಾಳೆ ನಾಡ ಅಧಿದೇವತೆ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ವರ್ದಂತಿ ಉತ್ಸವ ಅಚರಣೆಯಾಗುತ್ತಿದೆ. ಮೂರನೇ ಅಷಾಡ ಶುಕ್ರವಾರದಂದೇ ಬಂದಿರುವ ವರ್ಧಂತಿ ಮಹೋತ್ಸವದ ಕಾರಣ, ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದು, ಚಿನ್ನದ ಪಲಕ್ಕಿ ಉತ್ಸವಕ್ಕೆ ಬ್ರೇಕ್ ಬಿದ್ದಿದೆ. ಅಲ್ಲದೆ ಪ್ರತಿ ವರ್ಷ ಮೈಸೂರಿನ ಅರಮನೆ ಯಿಂದ ತೆರಳುತ್ತಿದ್ದ ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಇದಕ್ಕು ಮುನ್ನ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಗೆ ಅಭಿಷೇಕ, ಅಭ್ಯಂಜನ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮವಿದ್ದು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಉತ್ಸವ ಸೀಮಿತವಾಗಿದೆ. ಇನ್ನು ನಾಳೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದು, ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೇಂದ್ರ ರಾಜ್ಯ ಸರ್ಕಾರದ ಪ್ರೋಟೋಕಾಲ್ ಇರುವರಿಗೆ ಮಾತ್ರ ಬೆಟ್ಟಕ್ಕೆ ಪ್ರವೇಶವನ್ನ ಕಲ್ಪಿಸಲಾಗಿದೆ.