ಗುಡ್ನ್ಯೂಸ್- ಮೈಸೂರಲ್ಲಿ ಪ್ರಾಣಿ ದತ್ತು ಸ್ವೀಕಾರಕ್ಕೆ ಮುಂದಾದ ಪ್ರಾಣಿ ಪ್ರಿಯರು!
1 min readಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಸಾರ್ವಜನಿಕರು ಪ್ರಾಣಿ ಪ್ರಿಯರು ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡ್ತಿದ್ದಾರೆ. ಇದರಿಂದ ಮೃಗಾಲಯ ಕೊಂಚ ಮಟ್ಟಿನಲ್ಲಿ ಚೇತರಿಕೆ ಕಾಣುತ್ತಿದ್ದು ಮತ್ತಷ್ಟು ಜನರು ದತ್ತು ಸ್ವೀಕಾರ ಮಾಡುವಂತೆ ಮನವಿ ಮಾಡಲಾಗಿದೆ. ಅದರಂತೆ ಮೈಸೂರು ಸೇರಿದಂತೆ ನಾನಾ ಭಾಗದ ಜನರು ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡಿದ್ದಾರೆ.
ಮೈಸೂರಿನ ಅನೋಕ್ಷ ಎಂ.ಶೆಟ್ಟಿ ಅವರು ರೂ.50,500 ಪಾವತಿಸಿ ಜಾಗ್ವರ್, ನೈಲ್ ಮೊಸಳೆ, ಇಂಡಿಯನ್ ಕ್ರೆಸ್ಟೆಡ್ ಪೋಕ್ರ್ಯುಪಿನ್, ಕಾಳಿಂಗಸರ್ಪ ಮತ್ತು ಫಿಂಚ್, ಮೈಸೂರಿನ ಲಕ್ಷ್ಮಿದೇವಿ ಅವರು ರೂ.10,000 ಪಾವತಿಸಿ ಗ್ರೀನ್ ಅನಕೊಂಡ, ಬೆಂಗಳೂರಿನ ಮೋನಿಷರಾವ್ ರೂ. 35,000 ಪಾವತಿಸಿ ಇಂಡಿಯನ್ ಲೆಪರ್ಡ್, ಬೆಂಗಳೂರಿನ ಸಂಬ್ರಮ್ ಶ್ರೀಧರ್ ರೂ.3,500 ಪಾವತಿಸಿ ಕಾಳಿಂಗಸರ್ಪ, ಬೆಂಗಳೂರಿನ ಮಧುಕುಮಾರ್ ರೂ.3,500 ಪಾವತಿಸಿ ಬಿಳಿ ನವಿಲು, ತುಮಕೂರಿನ ಬಿ.ಆರ್ ಕಾರ್ತಿಕ್ ರೂ.6,000 ಪಾವತಿಸಿ ಲೆಪರ್ಡ್ ಕ್ಯಾಟ್ ಮತ್ತು ಬುಡ್ಜರಿಗರ್, ತುಮಕೂರಿನ ಕಾರ್ತಿಕ್ ಎನ್ ಜೈನ್ ರೂ.5,500 ಪಾವತಿಸಿ ಬಿಳಿ ನವಿಲು ಮತ್ತು ನಕ್ಷತ್ರ ಆಮೆ, ಬೆಂಗಳೂರಿನ ಸಾಗರ್ ದೇಶಪಾಂಡೆ ರೂ.5,000 ಪಾವತಿಸಿ ಲೆಪರ್ಡ್ ಕ್ಯಾಟ್, ಬೆಂಗಳೂರಿನ ಸಮೀರ್ ದೇಶಪಾಂಡೆ ರೂ. 3,500 ಪಾವತಿಸಿ ಬಿಳಿ ನವಿಲು, ಮೈಸೂರಿನ ಚಾರಿತ್ ಮಹೇಂದ್ರ ಮತ್ತು ಆರ್ ಮಹಾದೇವ ರೂ.35,000 ಪಾವತಿಸಿ ಜಾಗ್ವರ್ ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯದ ನಿರ್ವಹಣೆಗೆ ಕೈ ಜೋಡಿಸಿದ ಎಲ್ಲರಿಗೂ ಮೃಗಾಲಯವೂ ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.