ಕೇರಳದಲ್ಲಿ ಹೈ ಅಲರ್ಟ್- ಡೆಲ್ಟಾ ನಡುವೆ “ಝಿಕಾ ವೈರಸ್” ಆರ್ಭಟ!
1 min read- ಕೋರೋನಾ ರಣಕೇಕೆಯ ನಡುವೆಯೇ ಡೆಲ್ಟಾ ವೈರಸ್ ಕಾಡಿದ್ದು ಎಲ್ಲರಿಗು ಆತಂಕ ಶುರು ಮಾಡಿಸಿತ್ತು. ಡೆಲ್ಟಾ ಜೊತೆಗೆ ಡೆಲ್ಟಾ ಪ್ಲಸ್ ಕೂಡ ಸಾಕಷ್ಟು ಭಯವನ್ನ ಕಾಡಿತ್ತು. ಆದರೆ ಈಗ ಕೇರಳದಲ್ಲಿ ಹೊಸದಾದ ವೈರಸ್ ಕಂಡು ಬಂದಿದ್ದು ಮತ್ತೇ ಕರ್ನಾಟಕಕ್ಕೆ ಈ ವೈರಸ್ ಕಾಡುವ ಭೀತಿ ಎದುರಾಗಿದೆ.
ಹೌದು, ಎರಡನೇ ಅಲೆಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಝಿಕಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.
ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಗುರುವಾರ 13 ಝೀಕಾ ವೈರಸ್ ಪ್ರಕರಣಗಳು ಕಂಡು ಬಂದಿದೆ. ಸೋಂಕು ಪತ್ತೆಯಾದವರ ಸ್ಯಾಂಪಲ್ ಅನ್ನು ಪುಣೆಯ ವೈರಲಾಜಿ ವಿಭಾಗಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಇದು ಝೀಕಾ ವೈರಸ್ ಸೋಂಕು ಹರಡಿರುವುದು ಸ್ಪಷ್ಟವಾಗಿದೆ. ಈ ಕುರಿತು ಮಾತನಾಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್, 13 ಪ್ರಕರಣಗಳ ಬಗ್ಗೆ ಅನುಮಾನ ವ್ಯಕ್ತವಾಗಿ ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆಗೆ ಕಳುಹಿಸಿದ್ದೇವು. ಇದು ಝೀಕಾ ವೈರಸ್ ಸೋಂಕು ಎಂದು ವರದಿ ಬಂದಿದೆ ಎಂದಿದ್ದಾರೆ. ಇನ್ನು ಪತ್ತೆಯಾದ ಎಲ್ಲಾ ಪ್ರಕರಣಗಳು ತಿರುವನಂತರಪುರದಿಂದಲೇ ದಾಖಲಾಗಿದೆ ಎನ್ನಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಝೀಕಾ ವೈರಸ್ ಸೋಂಕು ಏಡೆಸ್ ಸೊಳ್ಳೆಯಿಂದ ಹಬ್ಬುತ್ತದೆ. ಬೆಳಗ್ಗಿನ ಹೊತ್ತು ಈ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಮೊದಲ ಝೀಕಾ ವೈರಸ್ ಪ್ರಕರಣ 1947ರಲ್ಲಿ ಉಗಾಂಡಾದ ಕೋತಿಗಳಲ್ಲಿ ಕಂಡು ಬಂದಿತ್ತು. ಇದಾದ ಬಳಿಕ 1952 ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮನುಷ್ಯರಲ್ಲಿ ಕಂಡು ಬಂದಿತ್ತು. ಏಷ್ಯಾ, ಆಫ್ರಿಕಾ, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಝೀಕಾ ವೈರಸ್ ಹರಡಿರುವುದು ಪತ್ತೆಯಾಗಿದೆ. ಇನ್ನು ಈ ಝೀಕಾ ವೈರಸ್ ಸೋಂಕಿಗೆ ಒಳಗಾದವರಲ್ಲಿ ಸಾಮಾನ್ಯವಾಗಿ ಜ್ವರ, ದದ್ದು, ಸ್ನಾಯು ಸೆಳೆತ, ಕೀಲು ನೋವು, ಅಸ್ವಸ್ಥತೆ ಮತ್ತು ತಲೆ ನೋವಿನ ಲಕ್ಷಣಗಳು ಕಂಡು ಬರುತ್ತದೆ. ಈ ಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ ಏಳು ದಿನಗಳವರೆಗೆ ಕಾಡುತ್ತದೆ.
ಇನ್ನು ಈ ಏಡಿಸ್ ಸೊಳ್ಳೆಯಿಂದ ಈ ಝೀಕಾ ಸೋಂಕು ಕಂಡು ಬರುತ್ತದೆ. ಇದರಲ್ಲಿ ಏಡಿಸ್ ಏಜಿಪ್ತಿ ಪ್ರಕಾರದ ಸೊಳ್ಳೆಗಳು ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಹಳದಿ ಜ್ವರಕ್ಕೆ ಕೂಡ ಕಾರಣವಾಗುತ್ತದೆ.
ಈ ಸೋಂಕು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ, ಗರ್ಭಿಣಿ ಮಹಿಳೆಯರಲ್ಲಿ ಈ ಸೋಂಕು ಕಂಡು ಬಂದರೆ, ಅದು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಸಾಕಷ್ಟು ಹಾನಿ ಮಾಡುವ ಸಾಧ್ಯತೆ ಹೆಚ್ಚು. ಇದರಿಂದ ನವಜಾತ ಶಿಶುಗಳಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ.
ದೇಶದಲ್ಲಿಯೇ ಮೊದಲ ಕೋವಿಡ್ ಪ್ರಕರಣ ಪತ್ತೆಯಾದ ಕೇರಳದಲ್ಲಿ ಸೋಂಕಿನ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕಿನ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿ ಕೇರಳ ನಿಂತಿದೆ. ಈ ನಡುವೆ ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚುಗೊಂಡಿದೆ. ಜೂನ್ 28ರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಎರಡರಷ್ಟು ಹೆಚ್ಚಿದ್ದು, ಡೆಲ್ಟಾ ಸೋಂಕಿ ಪ್ರಕರಣಗಳು ಕೂಡ ಕಂಡು ಬಂದಿದೆ. ಇದು ಮೂರನೇ ಅಲೆ ಎಚ್ಚರಿಕೆ ಎನ್ನಲಾಗಿದೆ. ಈ ನಡುವೆ ಕೇರಳದ ರಾಜ್ಯದಲ್ಲಿ ಝೀಕಾ ವೈರಸ್ ಪ್ರಕರಣ ಕಂಡು ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
ಏನಿದು ಝಿಕಾ ವೈರಸ್?
ಝಿಕಾ ಎಂಬುದು ಸೊಳ್ಳೆಗಳಿಂದ ಹರಡುವ ರೋಗ. ಜ್ವರ, ಕೆಂಪು ಕಲೆಗಳು, ಸ್ನಾಯು, ಕೀಲುಗಳಲ್ಲಿ ನೋವು, ತಲೆ ನೋವು ಈ ಸೋಂಕಿನ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು 2ರಿಂದ ಏಳು ದಿನಗಳವರೆಗೆ ಇರುತ್ತವೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ 1947ರಲ್ಲಿ ಉಗಾಂಡದಲ್ಲಿ ಮಂಗಗಳಲ್ಲಿ ಪತ್ತೆಹಚ್ಚಿತ್ತು. ಆಫ್ರಿಕಾ, ಅಮೆರಿಕ, ಏಷ್ಯಾ ಹಾಗೂ ಪೆಸಿಫಿಕ್ನಲ್ಲಿ ಕಂಡುಬಂದಿದ್ದು, ಇದೀಗ ಮೊದಲ ಬಾರಿ ಕೇರಳದಲ್ಲಿ ಪತ್ತೆಯಾಗಿದೆ.