ಮೈಸೂರಲ್ಲಿ ಡೆಲ್ಟಾ ಪ್ಲಸ್ ವೈರಸ್ ಇಲ್ಲ- ಕರೋನಾ ಕಂಟ್ರೋಲ್ಗೆ ಬರ್ತಿದೆ- ಡಿಸಿ ಬಗಾದಿ ಗೌತಮ್!
1 min readಡೆಲ್ಟಾ ಪ್ಲಸ್ ವೈರಸ್ ಮೈಸೂರಿನಲ್ಲಿ ಪತ್ತೆಯಾಗಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ. ಕಳೆದ 7 ದಿನಗಳಲ್ಲಿ ಜಿಲ್ಲೆಯಿಂದ 40 ಸ್ಯಾಂಪಲ್ಸ್ ಕಳುಹಿಸಲಾಗಿದ್ದು, ಮೈಸೂರು ಮೆಡಿಕಲ್ ಕಾಲೇಜಿನಿಂದ ಬೆಂಗಳೂರಿನ ನಿಮಾನ್ಸ್ಗೆ ಸ್ಯಾಂಪಲ್ ಕಳುಹಿಸಲಾಗಿದೆ. ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಬೆಂಗಳೂರು ಲ್ಯಾಬ್ನಿಂದ ಮಾಹಿತಿ ಬಂದರೆ. ಈ ಬಗ್ಗೆ ನಾನೇ ಮಾಹಿತಿ ನೀಡುತ್ತೇನೆ. ಸದ್ಯಕ್ಕೆ ಮೈಸೂರಿಗರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
*ಟೆಸ್ಟಿಂಗ್ ಹೆಚ್ಚಳ ಕರೋನಾ ಕಂಟ್ರೋಲ್ಗೆ ಬರ್ತಿದೆ- ಡಿಸಿ*
ಮೈಸೂರಿನಲ್ಲಿ ಕಳೆದ 10 ದಿನಗಳಿಂದ ಟೆಸ್ಟಿಂಗ್ ಹೆಚ್ಚಿಸಲಾಗಿದ್ದು, ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 40ಸಾವಿರ ವ್ಯಾಕ್ಸಿನ್ ನೀಡಲಾಗಿದೆ ಎಂದು ಮೈಸೂರಿನಲ್ಲಿ ಡಿಸಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ. ಜುಲೈ 5ರೊಳಗೆ ಪಾಸಿಟಿವಿಟಿ ರೇಟ್ ಕಡಿಮೆಯಾಗಲಿದ್ದು, ಇದೀಗಾ ಅತೀ ಹೆಚ್ಚು ಟೆಸ್ಟಿಂಗ್ ನೆಡೆಯುತ್ತಿರೋದ್ರಿಂದ ಪಾಸಿಟಿವಿಟಿ ರೇಟ್ ಶೇ.9ರಷ್ಟಿದೆ. ಲಾಕ್ಡೌನ್ ಮುಂದುವರಿಕೆಯಿಂದ ಸೋಂಕು ನಿಯಂತ್ರಣಕ್ಕೆ ಬರ್ತಿದ್ದು ಜನರು ಹೆಚ್ಚು ಸಹಕಾರ ನೀಡ್ತಿರೋದ್ರಿಂದ ಅನ್ಲಾಕ್ ಮಾಡುವ ವಾತಾವರಣ ನಿರ್ಮಾಣವಾಗ್ತಿದೆ ಎಂದ್ರು. ಅಲ್ಲದೆ ಕೊರೊನಾ 3ನೇ ಅಲೆ ಬಗ್ಗೆ ಈಗಾಗಲೇ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಪ್ರತಿದಿನ 9800 ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಎಲ್ಲಾ ತಾಲೂಕು ಅಧಿಕಾರಿಗಳಿಗೂ ಈ ಬಗ್ಗೆ ನಿರ್ದೇಶನ ನೀಡಲಾಗಿದ್ದು, ನಾಳೆಯಿಂದ ಮತ್ತಷ್ಟು ಟೆಸ್ಟಿಂಗ್ ಪ್ರಮಾಣವನ್ನ ಹೆಚ್ಚಿಸಲಾಗುವುದು.
ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ದೃಷ್ಟಿಯಲ್ಲಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಡಿದೆ ಎಂದು ಇದೇವೇಳೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾಹಿತಿ ನೀಡಿದ್ರು