ರೋಹಿಣಿ ಸಿಂಧೂರಿ ಆರೋಪಕ್ಕೆ ತಿರುಗೇಟು ನೀಡಿದ ಮುಡಾ ಅಧ್ಯಕ್ಷ ರಾಜೀವ್
1 min readಮೈಸೂರು: ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಅವರ ಆರೋಪಕ್ಕೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ರಾಜೀವ್ ತಿರುಗೇಟು ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಅಧ್ಯಕ್ಷನಾದ ಬಳಿಕ ಯಾವುದೇ ನಿರ್ಧಾರ ಏಕಪಕ್ಷೀಯವಾಗಿ ತೆಗೆದುಕೊಂಡಿಲ್ಲ. ಎಲ್ಲ ಜಿಲ್ಲೆಗಳಿಗಿಂತ ಮೈಸೂರು ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ಈ ವರೆಗು ಒಂದು ಲಕ್ಷಕ್ಕು ಹೆಚ್ಚು ನಿವೇಶನ ರೂಪುಗೊಂಡಿದೆ. ಖಾಸಗಿ ಸಂಸ್ಥೆ, ಗೃಹ ನಿರ್ಮಾಣ ಸಂಘ ಕಾನೂನಾತ್ಮಕವಾಗಿ ಮಾಡಿದೆ. ಇದರಲ್ಲಿ 55 ಸಾವಿರ ನಿವೇಶನ ಮಾಡಿ ಹಂಚಲಾಗಿದೆ. ಇದರಲ್ಲಿ ಎಲ್ಲು ಸಹ ನಾನು ಅಧ್ಯಕ್ಷನಾಗಿ ಏಕಪಕ್ಷೀಯ ನಿರ್ಧಾರ ಕೈಗೊಂಡಿಲ್ಲ ಅಂತ ಹೇಳಿದರು.
ಇಲ್ಲಿರುವ ಎಲ್ಲ ಸದಸ್ಯರು, ಆಯುಕ್ತರು ಸೇರಿ ಎಲ್ಲರನ್ನ ಒಗ್ಗೂಡಿ ನಿರ್ಧಾರ ಕೈಗೊಂಡಿದ್ದೇವೆ. ನನ್ನ ಜೀವನದಲ್ಲಿ ಈ ವರೆಗು ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಿಲ್ಲ. ಯಾವುದೇ ಸರ್ಕಾರಿ ಭೂಮಿಯನ್ನು ನಾನು ದುರ್ಬಳಕೆ ಮಾಡಿಲ್ಲ. ಕಾನೂನು ಬಿಟ್ಟು ನಾನು ಏನು ಮಾಡಿಲ್ಲ. ಈ ಹಿಂದಿನ ಅಧಿಕಾರಿ ನನ್ನ ಹೆಸರು ಪ್ರಸ್ತಾಪಿಸಿ ಏಕವಚನ ಪದ ಪ್ರಯೋಗ ಮಾಡಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ, ಆ ಬಗ್ಗೆ ನಾನು ಮಾತಾಡಲ್ಲ. ನಾನು ಏನು ಎಂಬುದು ಹೇಳುವ ಸಮಯವಿದು. ಕೋವಿಡ್ ವೇಳೆ ಸಾಕಷ್ಟು ಸಮಸ್ಯೆಗೆ ಸ್ಪಂದನೆ ನೀಡಿದ್ದೇನೆ ಎಂದರು.
ಬೇರೆಯವರ ಮಾತಿಗೆ ನಾನು ಎಳ್ಳಷ್ಟು ಕಿಮ್ಮತ್ತು ಕೊಡೋದಿಲ್ಲ. ನಾನು ಬಿಳಿ ಪೇಪರ್ನಂತೆ – ಒಳ್ಳೆಯ ಕೆಲಸ ಮಾಡಿದ್ದೇನೆ. ಯಾವುದೋ ಆರೋಪಕ್ಕೆ ನಾನು ತಲೆಕಡೆಸಿಕೊಳ್ಳಲ್ಲ ಅಂತ ರೋಹಿಣಿ ಸಿಂಧೂರಿ ಆರೋಪಕ್ಕೆ ರಾಜೀವ್ ತಿರುಗೇಟು ನೀಡಿದ್ದಾರೆ. ನಾನು ಏನು ಎಂಬುದು ಎಲ್ಲರಿಗು ಗೊತ್ತಿದೆ. ನಾನು ನನ್ನ ಅಧಿಕಾರಿ ವರ್ಗ ಕೆಲಸ ಮಾಡಿ ಈ ಸ್ಕೇಚ್ ತಯಾರಿಸಿದ್ದೇವೆ. ಹೆಚ್ಚುವರಿ ಆರ್ಟಿಸಿ ಜಾಗ ಕೊಟ್ಟಿದ್ರೆ ಅದು ಕಂದಾಯ ಇಲಾಖೆಯ ಜವಬ್ದಾರಿ. ಇದರಲ್ಲಿ ಮುಡಾ ಪ್ರಾಧಿಕಾರಕ್ಕೆ ಯಾವುದೇ ಅವಕಾಶ ಇರೋದಿಲ್ಲ. ಇದು ಕಂದಾಯ ಇಲಾಖೆಯಿಂದ ಆದ ನಿರ್ಣಯದ ಆದೇಶ ಅಂತ ಮುಡಾ ಅನುಮತಿ ನೀಡಿದೆ ಎಂದ ರೋಹಿಣಿ ಸಿಂಧೂರಿಗೆ ರಾಜೀವ್ ಅವರು ದಾಖಲೆ ಸಮೇತ ಉತ್ತರಿಸಿದ್ದಾರೆ.
ಮೈಸೂರಿನ ಕೇರ್ಗಳ್ಳಿ ಬಡಾವಣೆ ಸಂಪೂರ್ಣ ತನಿಖೆ
2013ರ ವರೆಗು ಈ ಬಡಾವಣೆಗೆ ಪರಿಹಾರ ನೀಡಲಾಗಿದೆ. ಭೂಮಿ ಇಲ್ಲದಿದ್ದರು ಪರಿಹಾರ ಪಡೆದಿದ್ದಾರೆ. ಇಬ್ಬರು 21ಲಕ್ಷ ಪರಿಹಾರದ ಹಣ ಪಡೆದಿದ್ದಾರೆ. ಆದರೆ ಒಟ್ಟು 12 ಏಕರೆ ಹೀಗೆ ಆರ್ಟಿಸಿ ಇದ್ದರು ಭೂಮಿ ಇಲ್ಲದಿರುವುದು ಗೊತ್ತಾಗಿದೆ. ಇದರಲ್ಲಿ 7 ಏಕರೆಗೆ ಪರಿಹಾರದ ಹಣ ಪಡೆದಿದ್ದಾರೆ. ಹಾಗಾಗಿ ಈ 2013ರ ಈ ಯೋಜನೆಯ ಸಂಪೂರ್ಣ ತನಿಖೆಗೆ ಆದೇಶ ನೀಡುತ್ತಿದ್ದೇನೆ. ನಿರ್ಗಮಿತ ಡಿಸಿಗೆ ದೂರು ಕೊಟ್ಟಿದ್ದು ಇದೇ ವಿಚಾರ. ಭೂಮಿ ಇಲ್ಲದಿದ್ದರು ಪರಿಹಾರ ಪಡೆದಿದ್ದಾರೆಂದು ದೂರು ಕೊಟ್ಟಿದ್ದಾರೆ. ಹಾಗಾಗಿ ಈ ದೂರಿಗಿಂತ ಮುನ್ನ ನಾನು ನಮ್ಮ ಅಧಿಕಾರಿಗಳು ಈ ಸ್ಕೆಚ್ ಮಾಡಿಸಿದ್ದೇವೆ. ಈ ಕೇರ್ಗಳ್ಳಿಯ ಲ್ಯಾಂಡ್ ಸ್ಕೇಚ್ ಮಾಡಿಸಿದ ಬಳಿಕ ಈ ಸುಳ್ಳು ಮಾಹಿತಿ ಗೊತ್ತಾಗಿದೆ. ಹಾಗಾಗಿ ಇದನ್ನ ಮುಂದೆ ಹೇಗೆ ತನಿಖೆ ಮಾಡಿಸಬೇಕೆಂದು ಸಭೆ ಗಮನಕ್ಕೆ ತಂದು ಮಾಡುತ್ತೇವೆ. ನನ್ನ ಮೇಲಿನ ಹಿಂದಿನ ಡಿಸಿಯ ಆರೋಪ ನಿರಾಧಾರ ಎಂದ ರಾಜೀವ್.