ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ಡಿಸಿ ಬಗಾದಿ ಗೌತಮ್, ಎಸ್ಪಿ ಚೇತನ್ ಭೇಟಿ-ಪರಿಶೀಲನೆ
1 min readಮೈಸೂರು: ಹುಣಸೂರಿಗೆ ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಜಿಲ್ಲಾ ಪಂಚಾಯತ್ ಸಿಇಒ ಯೋಗೇಶ್ ರವರ ತಂಡವು ಹುಣಸೂರಿನ ಸಾರ್ವಜನಿಕ ಆಸ್ಪತ್ರೆ ಹಾಗೂ ನಗರದ ಆದರ್ಶ ಶಾಲೆಯಲ್ಲಿ ತೆರೆದಿರುವ 19ರ ನಿಗಾ ಘಟಕ ಕೇಂದ್ರಕ್ಕೆ ಇಂದು ಶಾಸಕ ಎಚ್ ಪಿ ಮಂಜುನಾಥ್ ರವರ ಜೊತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆದರು.
ಪರಿಶೀಲನಾ ವೇಳೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ ಹುಣಸೂರು ತಾಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಕರೋನಾ ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ ಮುನ್ನೆಚರಿಕೆ ಕ್ರಮ ವಹಿಸಿದ್ದು ಇದರಿಂದ ಕರೋನಾ ನಿಯಂತ್ರಣ ಹತೋಟಿ ತರುವಲ್ಲಿ ತಾಲೂಕು ಆಡಳಿತ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಈ ವೇಳೆ ಶಾಸಕ H P ಮಂಜುನಾಥ್ ರವರು ಸಾರ್ವಜನಿಕ ಆಸ್ಪತ್ರೆಗೆ ಕರೋನಾ ಸಾಂಕ್ರಾಮಿಕ ರೋಗಿಗಳ ಚಿಕಿತ್ಸೆಯ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಪೂರೈಸಿ ಕೊಡಬೇಕೆಂಬ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿ ಗಳಿಗೆ ಮಾತನಾಡಿ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಕರೋನಾ ಚಿಕಿತ್ಸ ವೈದ್ಯಕೀಯ ಸಲಕರಣೆಗಳನ್ನು ಪೂರೈಸಬೇಕೆಂದು ಸೂಚನೆ ನೀಡಿದರು.
ಈ ವೇಳೆ ಹುಣಸೂರಿನ ಉಪ ವಿಭಾಗಾಧಿಕಾರಿಗಳಾದ ವೀಣಾ, ತಹಸಿಲ್ದಾರ್ ಬಸವರಾಜ್, ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಡಿವೈಎಸ್ಪಿ ರವಿಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.