ಮೈಸೂರು ನೂತನ ಎಸ್ಪಿಯಾಗಿ ಆರ್. ಚೇತನ್ ಅಧಿಕಾರ ಸ್ವೀಕಾರ
1 min readಮೈಸೂರು: ಮೈಸೂರು ನೂತನ ಎಸ್ಪಿಯಾಗಿ ಆರ್. ಚೇತನ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದರೆ.
ನಗರದ ಎಸ್ಪಿ ಕಚೇರಿಯಲ್ಲಿ ಹೂ ಗುಚ್ಛ ನೀಡುವ ಮೂಲಕ ನೂತನ ಎಸ್ಪಿಯನ್ನ ನಿರ್ಗಮಿತ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಸ್ವಾಗತ ಕೊರಿದರು. ಈ ನಂತರ ಸಿ.ಬಿ ರಿಷ್ಯಂತ್ ರಿಂದ ಚೇತನ್ ಅವರು ಅಧಿಕಾರ ಸ್ವೀಕಾರ ಮಾಡಿದರು.
ನಾನು ಕರ್ನಾಟಕದವನೇ ಆಗಿರೋದ್ರಿಂದ ನನಗೆ ಮೈಸೂರು ಬಗ್ಗೆ ಗೊತ್ತಿದೆ. ಮೈಸೂರು ಜನರು ಸೌಮ್ಯ ಸ್ವಭಾವದವರು ಅಂತ ನೂತನ ಎಸ್ಪಿ ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜನರ ಅಹವಾಲುಗಳನ್ನ ಆಲಿಸಿ ಸಮಸ್ಯೆಗಳಿಗೆ ತ್ವರಿತವಾಗಿ ಸಂವಿಧಾನಿಕವಾಗಿ ಆಲಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಜನಸ್ನೇಹಿ ಪೊಲೀಸ್ ಹಾಗೂ ಸಮಸ್ಯೆಯನ್ನ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸುವ ಪೊಲೀಸ್ ವ್ಯವಸ್ಥೆ ತರಲು ಇಚ್ಛೆ ಪಡುತ್ತೇನೆ. ಜಿಲ್ಲೆಯ ಮಹಿಳೆಯರು, ದುರ್ಬಲ ವರ್ಗದವರ ನೋವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇನೆ. ಈ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರ ಕೋರುತ್ತೇನೆ. ಇತಿಹಾಸದಿಂದ ಮೈಸೂರನ್ನ ನೋಡಿದರೆ ಇಲ್ಲಿ ಸೌಮ್ಯ ಸ್ವಭಾವದ ಜನರು ಇದ್ದಾರೆ. ಮೈಸೂರಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದೇನೆ. ಜನರ ಅಪೇಕ್ಷೆಯಂತೆ ಕೆಲಸ ನಿರ್ವಹಿಸುತ್ತೇನೆ ಅಂತ ಆರ್.ಚೇತನ್ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.