ರೋಹಿಣಿ ಸಿಂಧೂರಿ vs ಸಾ.ರಾ.ಮಹೇಶ್ ಜಟಾಪಟಿ: ಮೈಸೂರಿನಲ್ಲಿ ಸಾರಾ ಮಹೇಶ್ ಏಕಾಂಗಿ ಪ್ರತಿಭಟನೆ
1 min readಮೈಸೂರು: ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಭೂ ದಾಖಲೆ ಬಿಡುಗಡೆ ಹಿನ್ನಲೆ ಸಿಂಧೂರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಾಸಕ ಸಾ ರಾ ಮಹೇಶ್ ಅವರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ನಡೆದ ಏಕಾಂಗಿ ಪ್ರತಿಭಟನೆಗೆ ಕೆಲ ಬೆಂಬಲಿಗರ ಸಾಥ್ ನೀಡಿದರು. ಈ ವೇಳೆ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಆಕ್ರೋಶ ಹೊರಹಾಕಿದರು.
ತಮ್ಮ ಮೇಲಿನ ಆರೋಪವನ್ನ ಅಲ್ಲಗೆಳೆದ ಸಾರಾ ಮಹೇಶ್ ನಮ್ಮ ಎಲ್ಲ ದಾಖಲೆಗಳು ಕ್ರಮಬದ್ಧವಾಗಿವೆ. ನಮ್ಮ ದಾಖಲೆಯಲ್ಲಿ ಯಾವುದೇ ಲೋಪ ಇಲ್ಲ. ನನ್ನ ದಾಖಲೆ ಎಲ್ಲವು ಕ್ರಮಬದ್ಧವಾಗಿದ್ದು ಅದನ್ನ ನಾನು ಬಿಡುಗಡೆ ಮಾಡುತ್ತೇನೆ. ಕೆಲವೇ ಕ್ಷಣದಲ್ಲಿ ಸರಿಯಾಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಆರೋಪವನ್ನ ಸಾರಾ ಮಹೇಶ್ ಅಲ್ಲಗೆಳೆದಿದ್ದಾರೆ.
ನನ್ನ ಒಡೆತನದಲ್ಲಿರುವ ಸಾ.ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ. ಆದ್ದರಿಂದಲೇ ಏಕಾಂಕಿ ಪ್ರತಿಭಟನೆ ಶುರು ಮಾಡಿದ್ದೇನೆ. ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ. ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಮಾತ್ರವಲ್ಲ, ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಅವರು ಮಾಡಿರುವ ಆರೋಪ ಸುಳ್ಳಾದರೆ ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು. ಮಕ್ಕಳನ್ನು ಆಡಿಸಿಕೊಂಡು, ಅಡಿಗೆ ಮಾಡಿಕೊಂಡು ಇರಲು ಆಂಧ್ರಕ್ಕೆ ಕಳುಹಿಸಬೇಕು ಅಂತ ಪ್ರತಿಭಟನೆ ವೇಳೆ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ಇನ್ನು ಸಾ.ರಾ.ಮಹೇಶ್ ಧರಣಿ ಸ್ಥಳಕ್ಕೆ ಆಗಮಿಸಿದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅಹವಾಲು ಸ್ವೀಕರಿಸಿದರು. ಸಾ.ರಾ.ಕನ್ವೆನ್ಷನ್ ಹಾಲ್ ರಾಜ ಕಾಲುವೆ ಮೇಲೆ ನಿರ್ಮಾಣವಾಗಿದೆ ಎಂಬ ರೋಹಿಣಿ ಸಿಂಧೂರಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಸಿಂಧೂರಿ ದಾಖಲೆ ಪ್ರಕಾರ ಅದು ನಿಜವೇ ಅಗಿದ್ದರೆ ಇಡೀ ಕನ್ವೆನ್ಷನ್ ಹಾಲ್ ಗವರ್ನರ್ ಹೆಸರಿಗೆ ಬರೆದುಕೊಡ್ತೇನೆ ಎಂದರು. ಪ್ರಾದೇಶಿಕ ಆಯುಕ್ತರು ಸಾ.ರಾ. ಮಹೇಶ್ ಅವರ ಅಹವಾಲು ಆಲಿಸಿದರು. ಕಾನೂನು ವಿರುದ್ದವಾಗಿ ಏನೇ ಮಾಡಿದ್ದರೂ ಕ್ರಮ ಕೈಗೊಳ್ಳಿ ಅಂತ ಪ್ರಾದೇಶಿಕ ಆಯುಕ್ತರಿಗೆ ಸಾ.ರಾ. ಮಹೇಶ್ ಮನವಿ ಮಾಡಿದರು.