ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ! – ಎಚ್ ವಿಶ್ವನಾಥ್
1 min readಮೈಸೂರು: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೂ ಅಕ್ರಮ ಬಯಲಿಗೆಳೆದ ವಿಚಾರ. ಇದನ್ನು ತುರ್ತಾಗಿ ಜಾರಿಗೊಳಿಸುವಂತೆ ಎಂ.ಎಲ್.ಸಿ ಎಚ್ ವಿಶ್ವನಾಥ್ ನೂತನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಾಲ್ಕು ಆದೇಶಗಳನ್ನು ಹಿಂದಿನ ಡಿಸಿ ಆದೇಶ ಮಾಡಿದ್ದು ಅದರ ಪ್ರತಿಗಳನ್ನು ಮನವಿ ಪತ್ರದ ಜೊತೆ ವಿಶ್ವನಾಥ್ ಸಲ್ಲಿಸಿದ್ದಾರೆ. ಬರಿ ನಾಲ್ಕು ಪ್ರಕರಣಗಳು ಮಾತ್ರವಲ್ಲ ಇಂತಹ ಹಲವು ಪ್ರಕರಣಗಳಿವೆ. ಸುಪ್ರೀಂಕೋರ್ಟ್ ಆದೇಶ ಇದೆ. ಬಪರ್ ಜೋನ್ ಬಗ್ಗೆ ಇಲ್ಲಿ ಯಾವುದೇ ಮನೆ ಕೈಗಾರಿಕೆ ಬರುವಂತಿಲ್ಲ. ಇಲ್ಲಿ ಬಪರ್ ಜೋನ್ನಲ್ಲಿ ಅಕ್ರಮ ನಡೆಸಲಾಗುತ್ತಿದೆ. ಇದರ ಬಗ್ಗೆ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಅಂತ ಡಿಸಿ ಭೇಟಿ ಬಳಿಕ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಕೊರೊನಾ ಓಡಿಸಿ ಅಂತಾ ಸಿಎಂ ಪಿಎಂ ಕರೆ ನೀಡಿದ್ದರು. ಆದರೆ ಇವರೆಲ್ಲಾ ಸೇರಿ ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ. ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು. ರೋಹಿಣಿ ಸಿಂಧೂರಿಗೆ ಶೂಟ್ ಮಾಡಿದ್ದಾರೆ. ಹಾಸನದಿಂದ ಇಲ್ಲಿ ಬಂದು ಪ್ರೆಸ್ಮೀಟ್ ಮಾಡುತ್ತಾರೆ. ಏನಾಗಿದೆ ಮೈಸೂರಿಗೆ ? ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಹೋಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೊನಾ ಓಡಿಸುವ ಬದಲು ಅಧಿಕಾರಿ ಓಡಿಸಿದರು. ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಒಳ್ಳೆಯ ಅಧಿಕಾರಿಗಳು. ಇಬ್ಬರು ಐಎಎಸ್ ಅಧಿಕಾರಿಗಳನ್ನು ಹೊರ ಹಾಕಿದ್ದು ರಾಜಕಾರಣಿಗಳ ಸ್ವಾರ್ಥ ಎಂದರು.
ತನಿಖೆಯಾಗಲು ಬಿಡಿ. ಏಕೆ ಹೆದರಿಕೆ ತನಿಖೆ ಮಾಡಲಿ ಅಂತ ನನ್ನ ಸ್ನೇಹಿತರಿಗೂ ಮನವಿ ಮಾಡುತ್ತೇನೆ. ನಾನು ಮತ್ತೆ ಅವರನ್ನು ಜಿಲ್ಲಾಧಿಕಾರಿ ಮಾಡಿ ಅಂತಾ ಹೇಳುವುದಿಲ್ಲ. ನಾನು ಸಾ ರಾ ಮಹೇಶ್ ಅವರ ಪ್ರತಿಭಟನೆಯನ್ನು ಸ್ವಾಗತಿಸುತ್ತೇನೆ. ಸಾ ರಾ ಕಲ್ಯಾಣಮಂಟಪದ ಬಗ್ಗೆ ದಾಖಲೆ ಕೊಡಲಿ ಎಂದರು.
ನಾಳೆ ಬೆಂಗಳೂರಿನಲ್ಲಿ ಸಿಎಂ ಸಿಎಸ್ ಭೇಟಿ ಮಾಡುತ್ತೇನೆ. ಮೈಸೂರು ಸುತ್ತ ಮುತ್ತ ಭೂ ಹಗರಣ ವಿಚಾರದಲ್ಲಿ ರೋಹಿಣಿ ಸಿಂಧೂರಿಯನ್ನು ವಿಶೇಷಧಿಕಾರಿಯಾಗಿ ನೇಮಿಸಲು ಮನವಿ ಮಾಡುವೆ. ಚಾಮುಂಡಿಬೆಟ್ಟದ ಸುತ್ತ ಮುತ್ತ ಸಹ ಒತ್ತುವರಿಯಾಗಿದೆ. 6 ತಿಂಗಳ ಕಾಲ ಅವರನ್ನು ನೇಮಿಸಲು ಶನಿವಾರ ಅಥವಾ ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಎಚ್ ವಿಶ್ವನಾಥ್ ತಿಳಿಸಿದ್ದಾರೆ.
ಈಗ ರಿಯಲ್ ಎಸ್ಟೇಟ್ ಇಂಡಸ್ಟ್ರಿಯಾಗಿದೆ. ಸಾ ರಾ ಮಹೇಶ್ ಯಾವ ಇಂಡಸ್ಟ್ರಿಲಿಯಸ್ಟ್.? ಮುಡಾ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ. ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ. ಶಿಲ್ಪಾನಾಗ್ ಇಲ್ಲಿ ಬಲಿಪಶುವಾಗಿದ್ದಾರೆ. ತಮ್ಮ ಉದ್ದೇಶದ ಬಗ್ಗೆ ಶಿಲ್ಪಾನಾಗ್ ಹೇಳಿದ್ದಾರೆ. ನಿಮ್ಮ ಕಮಿಷನ್ ಏನು ? ರೋಹಿಣಿ ಸಿಂಧೂರಿಯವರ ವರ್ಗಾವಣೆ ನಿಮ್ಮ ಕಮಿಷನ್? ಎಂದು ಎಚ್ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.