ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಮಾಡಿದ್ದು ತಪ್ಪು: ಅಮಾನತು ಮಾಡಬೇಕಿತ್ತು
1 min readಮೈಸೂರು: ಕರ್ತವ್ಯ ಲೋಪದಿಂದ ಈ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದು ತಪ್ಪು ಅವರನ್ನು ಅಮಾನತು ಮಾಡಬೇಕಿತ್ತು. ಈ ಎಲ್ಲಾ ಆರೋಪಗಳು ಸಾಬೀತಾಗಿದ್ದರೆ ವಜಾ ಮಾಡಬೇಕಿತ್ತು ಅಂತ ಮೈಸೂರಿನಲ್ಲಿ ಶಾಸಕ ಸಾ ರಾ ಮಹೇಶ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಆಂಧ್ರ ಮೂಲದ ಸಂವೇದನಾಶೀಲ ನಡವಳಿಕೆ ಇಲ್ಲದವರು ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ. ನೀವು ಖಡಕ್ ಅಧಿಕಾರಿ ಆಗಿದ್ದರೆ. ಸರಕಾರಿ ಕಾರ್ ತಗೋಂಡು ವರ್ಗಾವಣೆ ರದ್ದು ಮಾಡಿ ಅಂತ ರಾತ್ರೋರಾತ್ರಿ ಬೆಂಗಳೂರಿಗೆ ಯಾಕೆ ಹೋದ್ರಿ? 8 ತಿಂಗಳಾಗಿತ್ತು ನೀವು ಮೈಸೂರಿಗೆ ಬಂದು. ಈ ಅವಧಿಯಲ್ಲಿ ಯಾವ ಯಾವ ಸರಕಾರಿ ಭೂಮಿ ಒತ್ತುವರಿ ತೆರವು ಮಾಡಿದ್ದೀರಾ? ನೀವು ಇಂತಿಂಥ ಸರ್ವೆ ನಂಬರ್ ಒತ್ತವರಿ ಆಗಿತ್ತು. ಅದರ ಮೇಲೆ ನಾನು ಕ್ರಮ ಕೈಗೊಳ್ಳಬೇಕಿತ್ತು ಅನ್ನೋದನ್ನು ಸಿಎಂಗೆ ಹೇಳಿ.
ನಿಮ್ಮ ಅಧಿಕಾರವಾಧಿಯಲ್ಲಿ ಒಂದೇ ಒಂದು ಏಕರೆ ತೆರವು ಕಾರ್ಯಾಚರಣೆ ಮಾಡಿದ್ದೀರಾ? ನಾನು 10 ಆರೋಪ ಸಾಕ್ಷಿ ಸಮೇತ ಮಾಡಿದ್ದೇನೆ. ಆಂಧ್ರದ ಲಾಬಿಯಿಂದ ಕನ್ನಡಿಗ ಅಧಿಕಾರಿನಾ ಎತ್ತಂಗಡಿ ಮಾಡಿಸಿ ಮೈಸೂರಿಗೆ ಬಂದ್ರಿ. ಬಂದ ದಿನದಿಂದ ನಿಮ್ಮ ವಿರುದ್ದ ಮಾತಾಡಿದ್ದೇನೆ. ಅವತ್ತಿನಿಂದ ನನ್ನ ಬಗ್ಗೆ ತನಿಖೆ ಶುರು ಮಾಡಬಹುದಿತ್ತಲ್ವಾ? ಯಾಕೆ ಮಾಡಲಿಲ್ಲ. ಈಗಲೂ ನಿಮ್ಮ ಬಳಿ ಇರೋ ವರದಿನಾ ಸರಕಾರಕ್ಕೆ ಕೊಡಿ. ಆ ಬಗ್ಗೆ ಸರ್ಕಾರದಿಂದಲೇ ತನಿಖೆ ನಡೆಯಲಿ. ನಾನು ವರ್ಗಾವಣೆ ಮಾಡಿ ಎಂದು ಧ್ವನಿ ಎತ್ತಿಲ್ಲ. ಆದರೆ, ಅವರ ಕಾರ್ಯವೈಖರಿ ಬಗ್ಗೆ ಧ್ವನಿ ಎತ್ತಿದ್ದು ನಿಜ.
ಒಟ್ಟು ಐದು ಸಾವಿರ ಜನ ಕೋವಿಡ್ ನಿಂದ ಸತ್ತಿದ್ದಾರೆ. ಅದಕ್ಕೂ ದಾಖಲೆ ಬಿಡುಗಡೆ ಮಾಡಿದ್ದೇನೆ ಅಂತ ಮತ್ತೇ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಗುಡುಗಿದ್ದಾರೆ.
ಈಜುಕೊಳ ಪೈಲೆಟ್ ಯೋಜನೆ ಹೇಳಿಕೆ:
ಈಜುಕೊಳ ಮಾಡಿ. ಹಿಂದುಳಿದ ತಾಲ್ಲೂಕಿನಲ್ಲಿ ಮಾಡಿ. ನಿಮ್ಮ ಮನೆಗೆ ಏಕೆ ಮಾಡಿಸಿಕೊಂಡಿರಿ? ಆಶ್ರಯ ಮನೆ ಕಟ್ಟಿಸಿಕೊಂಡು ವಾಸ ಮಾಡಿ. ಮಾದರಿ ಶೌಚಾಲಯ ಕಟ್ಟಿಸಿಕೊಂಡು ಬಳಸಿ ಅಂತ ರೋಹಿಣಿ ಸಿಂಧೂರಿಗೆ ಸಾ ರಾ ಮಹೇಶ್ ಸಲಹೆ ನೀಡಿದರು.
ರೈತರಿಗೆ ವಿದ್ಯುತ್ ಸಿಗುತ್ತಿಲ್ಲ ಇವರು ಇಷ್ಟೊಂದು ಬಳಸುತ್ತಿದ್ದಾರೆ. ಐಎಎಸ್ ಅಧಿಕಾರಿ ಸಾವಿನ ವಿಚಾರ ಸಿಬಿಐ ವರದಿ ನಾವು ತೆಗೆಯುತ್ತೇವೆ. ಮೊದಲು ರಾಜ್ಯ ಸರ್ಕಾರ ಅಧಿಕಾರಿಗಳ ಕೆಲಸ ಏನು. ಅಧಿಕಾರಿಗಳಿಗೆ ಏಕೆ ಪ್ರಚಾರದ ಹುಚ್ಚು. ಮೊಬೈಲ್ ಸರ್ಕಾರದ್ದು ಅಧಿಕೃತ ಇದನ್ನು ಗಮನಿಸಿ. ಜನರಿಗೆ ಬರೀ ರಾಜಕಾರಿಗಳೇ ಕಾಣಿಸುತ್ತಾರೆ. ಎಲ್ಲಾ ಸಿನಿಮಾದಲ್ಲೂ ರಾಜಕಾರಣಿಗಳನ್ನು ಕೆಟ್ಟದಾಗಿ ತೋರಿಸಿ ಈಗಾಗಿದೆ.
ಲೋಕಾಯುಕ್ತ ಇಂದು ಎಷ್ಟು ಅಧಿಕಾರಿಗಳ ಮೇಲೆ ದಾಳಿಯಾಗಿದೆ. ರಾಜಕಾರಣಿಗಳ ಮೇಲೆ ಎಷ್ಟು ದಾಳಿಯಾಗಿದೆ ? ರಾಜಕಾರಣಿಗಳು ಒಳ್ಳೆಯವರಿದ್ದಾರೆ ಕೆಟ್ಟವರು ಇದ್ದಾರೆ. ಮೈಸೂರು ರಾಜಕಾರಣಿಗಳು ಯಾರು ಮನುಷ್ಯರಲ್ಲವಾ ? ಮೈಸೂರಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಪ್ರಾಮಾಣಿಕರಲ್ಲವಾ ? ಆತ್ಮಸಾಕ್ಷಿ ಮನಸಾಕ್ಷಿಯಿದ್ದರೆ ಸಿಎಂಗೆ ಪತ್ರ ಬರೆದು ಮಾಹಿತಿ ಕೊಡಿ. ಇಂತಹ ಅಧಿಕಾರಿಗಳನ್ನು ನಾನು ನೋಡಿಯೇ ಇಲ್ಲ. ಯಾವ ಆಂಧ್ರದ ಕೆಲ ಐಎಎಸ್ ಅಧಿಕಾರಿಗಳ ಕುಮ್ಮಕ್ಕಿನಿಂದ ಈ ರೀತಿ ವರ್ತನೆ. ಆಕೆಯ ವಿರುದ್ದ ಕ್ರಮ ಕೈಗೊಳ್ಳಬೇಕು.
ಮೈಸೂರು ರಾಜಕಾರಣಿಗಳ ಕಳಂಕದ ಬಗ್ಗೆ ತನಿಖೆ ಮಾಡಬೇಕು. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ಮಾಡುವೆ. ರಾಜಕಾರಣಿಗಳಿಗೆ ಬಂದಿರುವ ಕಳಂಕ ನಿವಾರಣೆಗೆ ವಿಧಾನಸಭೆಯಲ್ಲಿ ಹೋರಾಟ ಮಾಡುವೆ ಅಂತ ಸಾ ರಾ ಮಹೇಶ್ ಘೋಷಣೆ ಮಾಡಿದ್ದಾರೆ.
ರೋಹಿಣಿ ಪ್ರಚಾರ ಪ್ರಿಯೆ ಸಂವೇದನಶೀಲತೆಯಿಲ್ಲದ ಅಧಿಕಾರಿ. ಒಬ್ಬ ಸಚಿವನಿಗೆ ಮನೆ ನವೀಕರಣಕ್ಕೆ 2 ಲಕ್ಷ. ಅಂದಾಜು 65 ಲಕ್ಷ ಖರ್ಚು ಮಾಡಲು ಯಾರು ಅನುಮತಿ ನೀಡಿದರು. ಬೇಲಿಯೇ ಎದ್ದು ಹೊಲ ಮೇಯ್ದಂತೆ. ಇವರು ಸೇವೆ ಮಾಡಲು ಅಲ್ಲ ಮೈಸೂರಿಗೆ ಬಂದಿದ್ದು. ನಾವು ಎಲ್ಲಾ ಮನೆಗಳನ್ನು ಕಟ್ಟಿದ್ದೇವೆ. ಒಂದೊಂದು ಮನೆಗೆ ಕೆಇಬಿ ಬಿಲ್ ಎಷ್ಟು ಬರುತ್ತದೆ ?
ಮೈಸೂರು ಭಾಗದಲ್ಲಿ ಜನರಿಗೆ ಕುಡಿಯುವ ನೀರಿಲ್ಲ. ಈಜುಕೊಳಕ್ಕೆ ಬಳಸುತ್ತಿದ್ದದ್ದು ಕುಡಿಯುವ ನೀರು. ಮೂರು ಕೆಇಬಿ ಮೀಟರ್ ಇದೆ. ಪ್ರತಿ ಅಧಿಕಾರಿ ಮನೆ ಸರಾಸರಿ ಬಿಲ್ 4 ಸಾವಿರ, ದಸರಾ ವೇಳೆ 7 ಸಾವಿರ. ಆದರೆ ಜಿಲ್ಲಾಧಿಕಾರಿ ನಿವಾಸದಲ್ಲಿ ಸಿಂಗಂ ಅಥವಾ ಸಿಂಗಲೀಕ ಅಧಿಕಾರಿ. ಒಂದೊಂದು ತಿಂಗಳಲ್ಲಿ 50 ಸಾವಿರ ರೂಪಾಯಿಯಷ್ಟು ಬಳಕೆ ಮಾಡಿದ್ದಾರೆ. ಹಿಂದೆ ಇದ್ದವರು ಬಿಲ್ ಸಹಾ ನೋಡಿ 5 ಸಾವಿರ ರೂಪಾಯಿ ಬಂದಿತ್ತು ಅಂತ ಸಾರಾ ಮಹೇಶ್ ಆಕ್ರೋಶ ಹೊರಹಾಕಿದ್ದಾರೆ.
ಭಾರತ ಸಿಂಧೂರಿ ಸಿನಿಮಾ ವಿಚಾರ: ಅದು ಬಿಡುಗಡೆಯಾದ ಮೇಲೆ ಮತ್ತೊಂದು ಸಿನಿಮಾ ಮಾಡುತ್ತೇವೆ. ಬಡ ರೈತನ ಮಗ ಐಎಎಸ್ ಅಧಿಕಾರಿ. ಆಂಧ್ರದ ಅಧಿಕಾರಿಯ ಸಹವಾಸ. ಸಿಬಿಐ ವರದಿ ಆಧರಿಸಿ ನಾನೇ ಸಿನಿಮಾ ನಿರ್ಮಾಣ ಮಾಡುತ್ತೇನೆ ಅಂತ ಮೈಸೂರಿನಲ್ಲಿ ಶಾಸಕ ಸಾ ರಾ ಮಹೇಶ್ ಹೇಳಿಕೆ ನೀಡಿದ್ದಾರೆ.